ADVERTISEMENT

ಮಹಾಲಿಂಗಪುರ: ರಾಷ್ಟ್ರಮಟ್ಟದ ನೆಟ್‍ಬಾಲ್ ತಂಡಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 16:01 IST
Last Updated 20 ಡಿಸೆಂಬರ್ 2024, 16:01 IST
ಸ್ಫೂರ್ತಿ ಲಾಲಿಬುಡ್ಡಿ
ಸ್ಫೂರ್ತಿ ಲಾಲಿಬುಡ್ಡಿ   

ಮಹಾಲಿಂಗಪುರ: ಸಮೀಪದ ರನ್ನ ಬೆಳಗಲಿಯ ಶ್ರೀಗುರು ಮಹಾಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಸ್ಫೂರ್ತಿ ನಾರಾಯಣ ಲಾಲಿಬುಡ್ಡಿ ರಾಷ್ಟ್ರಮಟ್ಟದ ನೆಟ್‍ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲೆ ಕೊಲ್ಲೂರದ ಮೂಕಾಂಬಿಕಾ ದೇವಳ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ನೆಟ್‍ಬಾಲ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆ ತಂಡವನ್ನು ಸ್ಫೂರ್ತಿ ಪ್ರತಿನಿಧಿಸಿದ್ದಳು. ನಂತರ ನಡೆದ ರಾಷ್ಟ್ರಮಟ್ಟದ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕದ 12 ವಿದ್ಯಾರ್ಥಿನಿಯರ ತಂಡದಲ್ಲಿ ಸ್ಫೂರ್ತಿ ಸ್ಥಾನ ಪಡೆದಿದ್ದಾರೆ. ಛತ್ತೀಸ್‍ಗಡದ ಕೊರ್ಬಾದಲ್ಲಿ ಡಿ.25 ರಿಂದ 28 ರವರೆಗೆ ರಾಷ್ಟ್ರಮಟ್ಟದ ನೆಟ್‍ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಪ್ರಾಚಾರ್ಯ ಪಿ.ಎಚ್.ನಾಯಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT