ರಬಕವಿ ಬನಹಟ್ಟಿ: ‘ಜೀವನದಲ್ಲಿ ಯಶಸ್ವಿಯಾಗಬೇಕಾದರೆ ನಮ್ಮಲ್ಲಿ ಆತ್ಮ ವಿಶ್ವಾಸ ಮತ್ತು ನಂಬಿಕೆ ಮುಖ್ಯ. ಜೀವನದಲ್ಲಿ ನಿರ್ದಿಷ್ಟವಾದ ಗುರಿ ಹೊಂದಿರಬೇಕು. ಗುರಿ ಸಾಧನೆಗೆ ಸತತ ಪ್ರಯತ್ನ ಮುಖ್ಯವಾಗಿದೆ‘ ಎಂದು ಹುಬ್ಭಳ್ಳಿಯ ಭಾರತೀಯ ಸ್ಟೇಟ್ ಬ್ಯಾಂಕ್ ವಿಭಾಗೀಯ ಕಾರ್ಯಾಲಯದ ಸಹಾಯಕ ವ್ಯವಸ್ಥಾಪಕಿ ರಶ್ಮಿ ಹೊಸಮನಿ ತಿಳಿಸಿದರು.
ಇಲ್ಲಿನ ಎಸ್ ಟಿ ಸಿ ಬಿಬಿಎ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳ ಯಶಸ್ಸಿನ ಹಿಂದಿರುವ ಶಕ್ತಿ ನಮ್ಮ ಗುರುಗಳು. ಪ್ರತಿಯೊಬ್ಬರೂ ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಜೀವನದಲ್ಲಿ ನಾವು ಯಶಸ್ವಿಯಾಗುತ್ತೇವೆ. ಕಲಿತ ಶಿಕ್ಷಣ ಸಂಸ್ಥೆ, ಹೆತ್ತ ತಂದೆ ತಾಯಿ ಮತ್ತು ಗುರುಗಳನ್ನು ನಾವು ಗೌರವಿಸಬೇಕು’ ಎಂದು ತಿಳಿಸಿದರು.
ಜೆಎಸ್ಎಸ್ ಸಂಘದ ಆಡಳಿತ ಮಂಡಳಿ ನಿರ್ದೇಶಕ ಭೀಮಶಿ ಮಗದುಮ್ ಮಾತನಾಡಿ, ‘ವಿದ್ಯಾರ್ಥಿಗಳ ಪ್ರಗತಿಗಾಗಿ ಸಂಘವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದುಕೊಂಡು ಇಂದು ಉನ್ನತ ಪದವಿ ಪಡೆದುಕೊಂಡು ಅದೇ ಕಾಲೇಜಿಗೆ ಅತಿಥಿಗಳಾಗಿ ಬರುವುದು ದೊಡ್ಡ ಗೌರವ’ ಎಂದರು.
ಜೆಎಸ್ಎಸ್ ಸಂಘದ ಪಂಡಿತ ಹನಗಂಡಿ, ಬಿಬಿಎ ಸಂಯೋಜಕ ಎಸ್.ಬಿ. ಉಕ್ಕಲಿ, ಮಂಜುನಾಥ ಬೆನ್ನೂರ ಮಾತನಾಡಿದರು. ಶ್ರೀಶೈಲ ಯಾದವಾಡ, ಮಹಾದೇವಿ ಕೊಳಕಿ, ಜಿ.ಎಚ್.ಕಾಬರಾ, ಪ್ರಕಾಶ ಕೆಂಗನಾಳ, ಮನೋಹರ ಶಿರಹಟ್ಟಿ, ಕಾವೇರಿ ಜಗದಾಳ, ಲಕ್ಷ್ಮಿ ಖವಾಸಿ, ಶಿರಶಿ ಹಳೆಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.