
ರಬಕವಿ ಬನಹಟ್ಟಿ: ‘ಸಿದ್ಧೇಶ್ವರ ಸ್ವಾಮೀಜಿ ವಿಶ್ವ ಕಂಡ ಮಹಾನ್ ಸಂತ ಮತ್ತು ಶ್ರೇಷ್ಠ ಪ್ರವಚನಕಾರರು. ಸ್ವಾಮೀಜಿ ಲಿಂಗೈಕ್ಯರಾದ ದಿನವನ್ನು ಸರ್ಕಾರ ಪ್ರವಚನಕಾರರ ದಿನವನ್ನಾಗಿ ಘೋಷಿಸಬೇಕು’ ಎಂದು ಸಿದ್ಧೇಶ್ವರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಸ್.ಎಸ್. ಹೂಲಿ ತಿಳಿಸಿದರು.
ಸಂಘದ ಕಾರ್ಯಾಲಯದ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶ್ರೀಗಳು ದೇಶ–ವಿದೇಶಗಳಲ್ಲಿ ಪ್ರವಚನ ನೀಡುವ ಮೂಲಕ ನೂರಾರು ಜನರ ಬಾಳಿಗೆ ಬೆಳಕಾದರು. ಪ್ರವಚನಕಾರರ ದಿನದ ಮೂಲಕ ಸಿದ್ಧೇಶ್ವರ ಸ್ವಾಮೀಜಿಗೆ ವಿಶೇಷ ಗೌರವ ಸಲ್ಲಿಸಬೇಕು’ ಎಂದರು.
ಸಂಘದ ಅಧ್ಯಕ್ಷ ರಾಮಕಿಶನ ಲಡ್ಡಾ ಮಾತನಾಡಿ, ‘ಸಿದ್ಧೇಶ್ವರ ಸ್ವಾಮೀಜಿಯ ತತ್ವ–ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಪ್ರವಚನ ಮಾತುಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುತ್ತವೆ’ ಎಂದು ತಿಳಿಸಿದರು.
ಪರಪ್ಪ ಬಿಳ್ಳೂರ, ರಮೇಶ ಮಂಡಿ, ರಾಜು ಮಟ್ಟಿಕಲ್ಲಿ, ಪ್ರಕಾಶ ಕೊಕಟನೂರ, ಶ್ರೀಶೈಲ ಉಳ್ಳಾಗಡ್ಡಿ, ಶಾಂತವೀರ ಬೀಳಗಿ, ವಿವೇಕ ಸುಂಕದ, ಸಂಜೀವ ಬೆಳಗಲಿ, ದುಂಡಪ್ಪ ಕರಲಟ್ಟಿ, ರವಿ ಜಿಡ್ಡಿಮನಿ, ಸಿದ್ದು ಮಂಡಿ, ಜಗದೀಶ ಕುಂಚನೂರ, ವಾಣಿಶ್ರೀ ಜುಂಜಪ್ಪನವರ, ಶೈಲಾ ಕುಳ್ಳಿ, ಮಹಾದೇವ ತಳವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.