
ಬೀಳಗಿ: ‘ಮಹಾತ್ಮರು, ಸ್ವಾಮೀಜಿಗಳು ಹೇಗಿರಬೇಕು, ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟು, ಇಡೀ ಜಗತ್ತಿಗೆ ಜ್ಞಾನ ಉಣಬಡಿಸಿದವರು ಸಿದ್ಧೇಶ್ವರ ಸ್ವಾಮೀಜಿ’ ಎಂದು ಬೀಳಗಿ ಹುಚ್ಚಪ್ಪಯ್ಯನ ಮಠದ ಫಕೀರಯ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿದ್ಧೇಶ್ವರ ಗೆಳೆಯರ ಬಳಗದಿಂದ ಶುಕ್ರವಾರ ಏರ್ಪಡಿಸಿದ್ದ ಗುರು ನಮನ ಮಹೋತ್ಸವದಲ್ಲಿ ಮಾತನಾಡಿ, ‘ಪರಿಸರ, ಪಕ್ಷಿ, ಪ್ರಾಣಿಗಳನ್ನು ಸದಾ ಕಾಲ ಪ್ರೀತಿಸುತ್ತಿದ್ದ ಶ್ರೀಗಳು ನಮಗೆಲ್ಲ ಆದರ್ಶಪ್ರಾಯರು’ ಎಂದರು.
ಸೊಮಪ್ಪಯ್ಯನ ಮಠದ ಚೆನ್ನಬಸವ ಸ್ವಾಮೀಜಿ ಮಾತನಾಡಿದರು. ತೇಜಪ್ಪ ಕೊಲಿ, ಶಿವಪ್ಪ ಅವಟಿ, ಬಸವರಾಜ ಬೆಣ್ಣಿರೊಟ್ಟಿ, ನಂದು ಚಿಂತಾಮಣಿ, ಯಲ್ಲಪ್ಪ ಮೇಟಿ , ಶರಣು ವಸ್ತ್ರದ, ಸಿದ್ದು ಉಕ್ಕಲಿ, ಬಸು ಬೆಣ್ಣೆರೊಟ್ಟಿ, ಮಹಾಂತೇಶ ಕಟಗೇರಿ, ಜಿ.ಜಿ.ದಿಕ್ಷೀತ, ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.