
ಜಮಖಂಡಿ: ತಾಲ್ಲೂಕಿನ ಹುನ್ನೂರು ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ರಾಷ್ಟ್ರೀಯ ಬಸವ ದಳದ ಸತ್ಸಂಗ ಮಂಡಳಿಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಿದ್ಧೇಶ್ವರ ಶ್ರೀಗಳಿಗೆ ನುಡಿನಮನ ಸಲ್ಲಿಸಿದರು.
ಸಿದ್ಧೇಶ್ವರ ಸ್ವಾಮೀಜಿ ಪ್ರಥಮ ಪುಣ್ಯಸ್ಮರಣೆ ಹಿನ್ನೆಲೆ ಹಿರಿಯ ಸಾಹಿತಿ ವಸಂತ ಅಗಸಿಮನಿ ಅವರು ತಾವು ರಚಿಸಿದ ‘ಧನ್ಯನಾದೆ ಗುರುವೇ ಧನ್ಯನಾದೆ’ ಕವನ ವಾಚಿಸಿದರು. ಶಂಕರ ಸಾವಳಗಿ, ಕಲ್ಲಪ್ಪ ತೇಲಿ ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ತಾಲ್ಲೂಕಿನ ಹುನ್ನೂರು ಗ್ರಾಮದ ಬಸ್ ನಿಲ್ದಾಣ ಸಮೀಪದ ಮಹಾಲಕ್ಷ್ಮಿ ಆಟೋ ವರ್ಕ್ಸ್ ಬಳಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಲಾಯಿತು. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶೇಖರ ಭಜಂತ್ರಿ, ಸದಸ್ಯ ದಯಾನಂದ ದೇಸಾಯಿ, ಪಿಡಿಒ ಮಲ್ಲಪ್ಪ ರೂಗಿ, ಮುತ್ತಪ್ಪ ಪತ್ತಾರ, ದಶರಥ ಹೊಸೂರ ಇದ್ದರು.
ಕೃತಿ ಸೌಂದರ್ಯವನ್ನು ಆಸ್ವಾದಿಸಿ: ಸಂಗನಬಸವ ಉಟಗಿ
ಜಮಖಂಡಿ: ಸಿದ್ಧೇಶ್ವರ ಸ್ವಾಮೀಜಿ ಸದಾ ಪ್ರಕೃತಿ, ಪಕ್ಷಿ, ಹೂಗಳು ಹಾಗೂ ಮಕ್ಕಳ ಕುರಿತು ಮಾತನಾಡುತ್ತಿದ್ದರು. ಅವರು ಪ್ರಕೃತಿಯನ್ನು ಪೂಜಿಸುತ್ತಿದ್ದರು. ಸದಾ ಜಗತ್ತಿನ ಒಳಿತಿಗಾಗಿ ಜ್ಞಾನ ದಾಸೋಹ ನಡೆಸಿದರು. ವೇದ, ಉಪನಿಷತ್ತುಗಳನ್ನು ಕನ್ನಡಿಕರಿಸಿದರು. ಅಲ್ಲಮನ ವಚನಗಳಿಗೆ ದೀಪಿಕೆ ಒದಗಿಸಿಕೊಟ್ಟರು. ಸರಳ ಜೀವನ ಉದಾತ್ತ ಚಿಂತನ ಅವರ ಬಾಳಿನ ತತ್ತ್ವವಾಗಿತ್ತು’ ಎಂದು ಶಿಕ್ಷಕ ಸಂಗನಬಸವ ಉಟಗಿ ಹೇಳಿದರು.
ತಾಲ್ಲೂಕಿನ ಕುಂಬಾರಹಳ್ಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಿದ್ಧೇಶ್ವರ ಶ್ರೀಗಳ ಪುಣ್ಯಸ್ಮರಣೆ ಅಗವಾಗಿ ಮಂಗಳವಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಮುಖ್ಯಗುರು ನಾರಾಯಣ ಶಾಸ್ತ್ರಿ, ಶಿಕ್ಷಕಿ ಶಾರದಾ ಮಠ, ಸಂಜೀವ ಝಂಬುರೆ, ಸವಿತಾ ಬೆನಕಟ್ಟಿ, ಬಾಹುಬಲಿ ಮುತ್ತೂರ , ಚಂದ್ರಕಾಂತ್ ಪೊಲೀಸ್, ಶಿಕ್ಷಕಿ ಆಸೀಫಾಬಾನು ಮೋಮಿನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.