ADVERTISEMENT

ಮಹಾಲಿಂಗಪುರ: ಗಮನಸೆಳೆದ ಅಂಗವಿಕಲರ ಸಿಟಿಂಗ್ ಕಬಡ್ಡಿ

​ಪ್ರಜಾವಾಣಿ ವಾರ್ತೆ
Published 26 ಮೇ 2025, 13:50 IST
Last Updated 26 ಮೇ 2025, 13:50 IST
ಮಹಾಲಿಂಗಪುರದ ಕೆಎಲ್‍ಇ ಪದವಿ ಕಾಲೇಜಿನ ಒಳ ಕ್ರೀಡಾಂಗಣದಲ್ಲಿ ಸಿಟಿಂಗ್ ಕಬಡ್ಡಿ ಆಟದಲ್ಲಿ ನಿರತರಾದ ಅಂಗವಿಕಲರು
ಮಹಾಲಿಂಗಪುರದ ಕೆಎಲ್‍ಇ ಪದವಿ ಕಾಲೇಜಿನ ಒಳ ಕ್ರೀಡಾಂಗಣದಲ್ಲಿ ಸಿಟಿಂಗ್ ಕಬಡ್ಡಿ ಆಟದಲ್ಲಿ ನಿರತರಾದ ಅಂಗವಿಕಲರು   

ಮಹಾಲಿಂಗಪುರ: ಪಟ್ಟಣದ ಕೆಎಲ್‍ಇ ಪದವಿ ಕಾಲೇಜಿನ ಒಳ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ರಾಜ್ಯಮಟ್ಟದ ಅಂಗವಿಕಲರ ಸಿಟ್ಟಿಂಗ್‌ ಕಬಡ್ಡಿ ಎಲ್ಲರ ಗಮನಸೆಳೆಯಿತು.

ಪಟ್ಟಣದ ಅನಿಕೇತನ ವಿಕಲಚೇತನರ ಸಂಸ್ಥೆ, ಕೆಎಲ್‍ಇ ಪದವಿ ಕಾಲೇಜ್ ಹಾಗೂ ಸೂಳಿಭಾವಿಯ ಡಾ.ಎಪಿಜೆ ಅಬ್ದುಲ್ ಕಲಾಂ ವಿಕಲಚೇತನರ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಆಶ್ರಯದಲ್ಲಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ಮೈದಾನದಲ್ಲಿ ತೆವಳುತ್ತಲೇ ದೈಹಿಕವಾಗಿ ಸಹಜವಾಗಿರುವವರನ್ನು ನಾಚಿಸುವ ರೀತಿಯಲ್ಲಿ ಅಂಗವಿಕಲರು ಉತ್ಸಾಹದಿಂದ ಕಬಡ್ಡಿ ಆಡಿದರು. ಆಟಗಾರರು ತಮ್ಮ ಪಟ್ಟುಗಳನ್ನು ಪ್ರದರ್ಶಿಸುವ ಮೂಲಕ ನೆರದಿದ್ದವರನ್ನು ಹುಬ್ಬೇರಿಸುವಂತೆ ಮಾಡಿದರು.

ADVERTISEMENT

ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಂಡಕ್ಕೆ ₹15 ಸಾವಿ, ದ್ವಿತೀಯ ಸ್ಥಾನ ಪಡೆದ ಬೆಳಗಾವಿ ಜಿಲ್ಲೆಯ ಅಥಣಿ ತಂಡಕ್ಕೆ ₹ 10 ಸಾವಿರ, ತೃತೀಯ ಸ್ಥಾನ ಪಡೆದ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಂಡಕ್ಕೆ ₹ 7 ಸಾವಿರ ಹಾಗೂ ಚತುರ್ಥ ಸ್ಥಾನ ಪಡೆದ ಮಹಾಲಿಂಗಪುರ ತಂಡಕ್ಕೆ ₹ 5 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು.

ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ರನ್ನಬೆಳಗಲಿ ಸಿದ್ಧಾರೂಢಮಠದ ಸಿದ್ದರಾಮ ಶಿವಯೋಗಿ, ರಾಜೇಂದ್ರ ಪಾಟೀಲ, ರಾಜು ತೇರದಾಳ, ರೇಖಾ ಸೊನೋನಿ, ಎಂ.ಡಿ.ನರಗಟ್ಟಿ, ಶ್ರೀಕಾಂತ ಚನ್ನದಾಸರ, ಸಂಗಮೇಶ ಬಾವಿಕಟ್ಟಿ, ಶೇಖರ ಕಾಖಂಡಕಿ, ಉಮೇಶ ಚೆನ್ನಿ, ಸಿದ್ಧಾರೂಢ ಕೊಪ್ಪದ. ಚನ್ನಬಸು ಹೋಳಗಿ ಇದ್ದರು.

ಮಹಾಲಿಂಗಪುರದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಅಂಗವಿಕಲರ ಸಿಟಿಂಗ್ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಂಡಕ್ಕೆ ಟ್ರೋಫಿ ವಿತರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.