ಅಮೀನಗಡ: ಪ್ರತಿಯೊಂದು ಸಭೆ ಸಮಾರಂಭಗಳ ಯಶಸ್ಸಿನ ಹಿಂದೆ ಪೆಂಡಾಲ್ ಹಾಗೂ ಧ್ವನಿ ಬೆಳಕಿನ ನಿರ್ವಹಣೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ಬನಶಂಕರಿ ದೇವಿ ಕಲ್ಯಾಣ ಮಂಟಪದಲ್ಲಿ ಹುನಗುಂದ ಹಾಗೂ ಇಳಕಲ್ ಅವಳಿ ತಾಲ್ಲೂಕು ಪೆಂಡಾಲ್ ಮತ್ತು ಸಪ್ಲಾಯರ್ಸ್ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ನಡೆದ ಕರದಂಟು ನಾಡು ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಭೆ ಸಮಾರಂಭಗಳು ಉತ್ತಮ ಗುಣಮಟ್ಟದೊಂದಿಗೆ ಮೂಡಿಬರಲು ಅದರ ಹಿಂದೆ ಪೆಂಡಾಲ್ ಹಾಗೂ ಧ್ವನಿ ಬೆಳಕಿನ ಮಾಲೀಕರ ಹಾಗೂ ಕೆಲಸ ನಿರ್ವಹಣಾಕಾರರ ಕಠಿಣ ಪರಿಶ್ರಮ ಇರುತ್ತದೆ. ಹಲವು ಸಂಕಷ್ಟಗಳ ಮಧ್ಯೆ ಪೆಂಡಾಲ ವರ್ತಕರು ತಮ್ಮ ಕಾಯಕವನ್ನು ಮುಂದುವರಿಸಿಕೊಂಡು ಸಂಘಟನೆಯ ಮೂಲಕ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು .
ಪ್ರಭು ಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ, ಹಳೆ ಹುಬ್ಬಳ್ಳಿ ವೀರಭಿಕ್ಷಾವರ್ತಿ ಮಠದ ಶಿವಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪೆಂಡಾಲ್ ಹಾಗೂ ಸಪ್ಲಾಯರ್ಸ್ ಕ್ಷೇಮಾಭಿವೃದ್ಧಿ ಸಂಘದ ಹನುಗುಂದ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೀಮಭಿವೃದ್ಧಿ ಸಂಘದ ಸಂಸ್ಥಾಪಕ ಮಹಬೂಬ ಮುಲ್ಲಾ, ಸಂಘಟನೆಯ ರಫೀಕ್ ಪುಣೇಕರ್, ಆರ್ .ಲಕ್ಷ್ಮಣ್, ಮೃತ್ಯುಂಜಯ ಕರನಂದಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬೇಬಿ ಚವ್ಹಾಣ, ಶಿವಾಚಾರ ಸಮಾಜದ ಅಧ್ಯಕ್ಷ ಬಿ.ಎಸ್. ನಿಡಗುಂದಿ, ಪಟ್ಟಣ ಪಂಚಾಯಿತಿ ಸದಸ್ಯರಾದ ವಿ.ಎಸ್ ಕನ್ನೂರ, ಸಂತೋಷ ಐಹೊಳ್ಳಿ, ಸಂಘಟನೆಯ ಕಾರ್ಯದರ್ಶಿ ಖಾಜಾ ಅಮೀನ ಫಿರಜಾದೆ, ಉಪಾಧ್ಯಕ್ಷ ಸಂಗಮೇಶ ನಿಡಗುಂದಿ, ರಮೇಶ ಕುಂಬಾರ, ಶಂಕ್ರಪ್ಪ ಕಲಕೇರಿ, ನಾಗಪ್ಪ ವಂದಾಲ, ನೀಲಕಂಠ ಮುಸರಿ , ಚನ್ನಪ್ಪ ಶಾಂತಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.