ಕೂಡಲಸಂಗಮ (ಬಾಗಲಕೋಟೆ) : ರಾಷ್ಟ್ರೀಯ ಹೆದ್ದಾರಿ 50ರ ಕೂಡಲಸಂಗಮ ಕ್ರಾಸ್‌ನಲ್ಲಿ ಕೂಡಲಸಂಗಮ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಸೋಮವಾರ ಮಧ್ಯರಾತ್ರಿ ಮಹಾರಾಷ್ಟ್ರ ಬಸ್ ತಡೆದು ಕಪ್ಪು ಮಸಿ ಬಳಿದಿದ್ದಾರೆ.
ಸೊಲ್ಲಾಪುರ- ಬೆಂಗಳೂರು ಬಸ್ ತಡೆದು ಫಲಕದ ಮೇಲೆ ಕಪ್ಪು ಮಸಿ ಬಳಿದಿದ್ದಾರೆ. ನಂತರ ಬಸ್ ಚಾಲಕನನ್ನು ಕೆಳಗಿಳಿಸಿ ಅವರಿಂದ ಜೈ ಕರ್ನಾಟಕ ಘೋಷಣೆ ಹೇಳಿಸಿದ್ದಾರೆ.
ಬಸ್ ಮೇಲೆ ಕನ್ನಡ ಬಾವುಟ ಹಾರಿಸಿ, ಬಸ್ ಬೆಂಗಳೂರಿಗೆ ತೆರಳಲು ಬಿಟ್ಟಿದ್ದಾರೆ.
ಕನ್ನಡಿಗರ ಮೇಲೆ ಮರಾಠಿಗರ ಪುಂಡಾಟಿಕೆ ನಿರಂತರ ನಡೆದಿದ್ದು ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ಉಂಟು ಮಾಡಿದ್ದಾರೆ. ಮರಾಠರಿಗೆ ಕನ್ನಡಿಗರು ಏನು ಎಂದು ತೋರಿಸಿದ್ದೇವೆ. ನಮ್ಮ ರಾಜ್ಯದಲ್ಲಿ ಸಂಚರಿಸುವ ಬಸ್ ಗಳ ನಾಮಫಲಕ ಕನ್ನಡ ದಲ್ಲಿ ಯೇ ಇರಬೇಕು ಎಂದು ಕೂಡಲಸಂಗಮ ಕರವೇ ಘಟಕದ ಅಧ್ಯಕ್ಷ ಸಂಜು ಗೌಡರ ಆಗ್ರಹಿಸಿದರು.
ಪದಾಧಿಕಾರಿಗಳಾದ ಪ್ರವೀಣ ವಾಲಿಕಾರ, ಸೋಹಿಲ್ ಸುತ್ತಾರ, ಮಂಜು ವಡ್ಡರ, ಸಂಗಮೇಶ ಹೊತ್ತಗಿ ಮುಂತಾದವರು ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.