ADVERTISEMENT

ಕಲಾ ಪರ್ವ: ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 19 ಮೇ 2025, 14:11 IST
Last Updated 19 ಮೇ 2025, 14:11 IST
ಕಲಾ ಪರ್ವ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಗುಳೇದಗುಡ್ಡದ ಭಂಡಾರಿ ಕಾಲೇಜಿನ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿಯಿಂದ ಅಭಿನಂದಿಸಲಾಯಿತು
ಕಲಾ ಪರ್ವ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಗುಳೇದಗುಡ್ಡದ ಭಂಡಾರಿ ಕಾಲೇಜಿನ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿಯಿಂದ ಅಭಿನಂದಿಸಲಾಯಿತು   

ಗುಳೇದಗುಡ್ಡ: ಬಾಗಲಕೋಟೆಯ ಬಸವೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ವತಿಯಿಂದ ಈಚೆಗೆ ಆಯೋಜಿಸಲಾಗಿದ್ದ ಕಲಾಪರ್ವ-2025 ಕಾರ್ಯಕ್ರಮದಲ್ಲಿ ಪಟ್ಟಣದ ಭಂಡಾರಿ ಹಾಗೂ ರಾಠಿ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು `ಬಿಮ್ಸ್ ಜನರಲ್ ಚಾಂಪಿಯನ್ಸ್-2025' ಆಗಿ ಹೊರಹೊಮ್ಮಿದ್ದಾರೆ.

ರಿತಿಕಾ ಕಾವಡೆ, ರೇಣುಕಾ ದೋಂಗಡೆ, ಐಶ್ವರ್ಯಾ ಪಟ್ಟಣಶೆಟ್ಟಿ, ವಿನಿತಾ ಕಲ್ಬುರ್ಗಿ, ದೀಪಾ ಅರಸಿದ್ಧಿ, ಐಶ್ವರ್ಯ ಪವಾರ್, ರಕ್ಷಿತಾ ನಿರಂಜನ್, ಪೂಜಾ, ದೀಪಾ ದಾಡಕುಂಡಿ ಮತ್ತು ಮೇಫಾ ಪತ್ತಾರ್ ಸೇರಿದಂತೆ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ಪಿ.ಅಳ್ಳಿಚಂಡಿ ಹಾಗೂ ವಿಭಾಗದ ಮುಖ್ಯಸ್ಥ ಪ್ರೊ. ಗಿರೀಶ್‍ಕುಮಾರ್ ಎಂ.ತರಬೇತಿ ನೀಡಿದ್ದಾರೆ.

ADVERTISEMENT

ಈ ಕಾರ್ಯಕ್ರಮದಲ್ಲಿ 16ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಿದ್ದವು. 

ಸಾಧಕ ವಿದ್ಯಾರ್ಥಿ ಹಾಗೂ ತರಬೇತಿ ನೀಡಿದ ಪ್ರಾಧ್ಯಾಪಕರಿಗೆ ಸಂಸ್ಥೆ ಚೇರ್‌ಮನ್‌ ಕಮಲ್‍ಕಿಶೋರ ಭಂಡಾರಿ, ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ, ಆಡಳಿತ ಮಂಡಳಿಯ ನಿರ್ದೇಶಕರು, ಸದಸ್ಯರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.