ADVERTISEMENT

ಜಮಖಂಡಿ | ಕಬ್ಬಿಗೆ ಗರಿ: ಇಳುವರಿ ಕುಠಿತ ನಷ್ಟದ ಭೀತಿಯಲ್ಲಿ ರೈತರ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 4:58 IST
Last Updated 11 ಡಿಸೆಂಬರ್ 2025, 4:58 IST
ಜಮಖಂಡಿ: ತಾಲ್ಲೂಕಿನ ಹುಲ್ಯಾಳ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೆಳೆದ ಕಬ್ಬು ಗರಿ ತೆಗೆದಿರುವದು.
ಜಮಖಂಡಿ: ತಾಲ್ಲೂಕಿನ ಹುಲ್ಯಾಳ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೆಳೆದ ಕಬ್ಬು ಗರಿ ತೆಗೆದಿರುವದು.   

ಜಮಖಂಡಿ: ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ರೈತರು ಬೆಳೆದ ಕಬ್ಬು ಸಕಾಲದಲ್ಲಿ ಕಾರ್ಖಾನೆಗಳಿಗೆ ಕಳಿಸಲು ವಿಳಂಬವಾಗುತ್ತಿರುವ ಕಾರಣ ಕಬ್ಬು ಗರಿ ತೆಗೆಯುತ್ತಿದ್ದು ಇದರಿಂದ ಇಳುವರಿ ಕುಂಠಿತವಾಗುತ್ತಿದ್ದು ರೈತರು ನಷ್ಟದ ಭೀತಿಯಲ್ಲಿದ್ದಾರೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೃಷ್ಣಾ ನದಿ ಎಡ ಮತ್ತು ಬಲ ಹಾಗೂ ಸಾವಳಗಿ ಭಾಗದಲ್ಲಿ ಹೆಚ್ಚಿನ ನೀರು ಇರುವದರಿಂದ ರೈತರು ಕಬ್ಬು ಬೆಳೆಯುತ್ತಾರೆ. ಅದರ ಪೈಕಿ ಶೇ.60-70 ರಷ್ಟು ಕಬ್ಬು ಬೆಳೆಯುತ್ತಾರೆ, ಮೊದಲು 11-12 ತಿಂಗಳಿಗೆ ಗರಿ ತೆಗೆಯುತ್ತಿತ್ತು, ಆದರೆ ಇತ್ತೀಚೆಗೆ ರಸಾಯನಿಕ ಅಧಿಕ ಬಳಕೆ ಹಾಗೂ ವಾತಾವರಣದ ಪರಿಣಾಮವಾಗಿ 8-9 ತಿಂಗಳಲ್ಲಿಯೇ ಗರಿ ತೆಗೆಯುತ್ತಿದೆ.

ಕಬ್ಬು ಗರಿ ತೆಗೆಯಲು ಪ್ರಾರಂಭವಾದ ನಂತರ ಎಲೆ ಬೀಡುವದನ್ನು ನಿಲ್ಲಿಸುತ್ತದೆ, ಎಲೆ ಬೀಡುವದನ್ನು ನೀಲಿಸಿದರೆ ಕಬ್ಬಿಗೆ ಪೂರೈಕೆಯಾಗುವ ಆಹಾರ ನಿಂತು ಹೋಗುತ್ತದೆ, ಆಹಾರ ನಿಂತ ತಕ್ಷಣ ಕಬ್ಬಿನಲ್ಲಿ ಬೆಂಡು ಒಡೆದು ಇಳುವರಿ ಕಡಿಮೆಯಾಗುತ್ತದೆ.

ADVERTISEMENT

ಈ ಭಾರಿ ರೈತರ ಪ್ರತಿಭಟನೆಯಿಂದ 15 ದಿನಗಳ ಕಾಲ ಕಾರ್ಖಾನೆಗಳು ಪ್ರಾರಂಭವಾಗಲು ವಿಳಂಬವಾಯಿತು, ವಿಳಂಬದ ಕಾರಣದಿಂದ ರೈತರು ಕಬ್ಬು ಕಡಿಸಲು ಪರದಾಡಬೇಕಾಗಿದೆ, ಕಬ್ಬು ಕಟಾವು ಮಾಡುವವರು ಸಿಗದ ಕಾರಣ ಸಕಾಲಕ್ಕೆ ಸಾಗಣೆಯಾಗದ ಕಾರಣ ಆಳೆತ್ತರಕ್ಕೆ ಬೆಳೆದ ಕಬ್ಬಿಗೆ ಗರಿ ಮೂಡುತ್ತಿದೆ.

ಕಬ್ಬಿಗೆ ಗರಿ ಮೂಡಿದರೆ ಎಕರೆಗೆ 50-60 ಟನ್ ತೂಕ ಬರುವ ರೈತನಿಗೆ 35-40 ಟನ್ ಮಾತ್ರ ತೂಟ್ ಬರುತ್ತದೆ, ಕೆಳಗಿನಿಂದ ಮೇಲಿನವರೆಗೆ ಕಬ್ಬಿನಲ್ಲಿ ಬೆಂಡು ಒಡೆದು ಕಬ್ಬಿನಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ತೂಕದಲ್ಲಿ ಭಾರಿ ವ್ಯತ್ಯಾಸ ಕಂಡು ಬರುತ್ತದೆ.

ರೈತರು ಬೇಗನೆ ಕಬ್ಬು ಕಾರ್ಖಾನೆಗೆ ಸಾಗಿಸಬೇಕೆಂದು ಕಬ್ಬು ಕಟಾವು ಮಾಡುವ ಗ್ಯಾಂಗಗಳಿಗೆ ಅಧಿಕ ಲಗಾನಿ ನೀಡಿ ಕಬ್ಬು ಕಟಾವು ಮಾಡಿಸುತ್ತಿದ್ದಾರೆ, ಗ್ಯಾಂಗನವರು ಒಂದು ಟ್ರಪ ಕಬ್ಬಿಗೆ 3-4ಸಾವಿರ ಹಣ ಕೇಳುತ್ತಿದ್ದಾರೆ, ಇದು ಕಬ್ಬು ಬೆಳೆಗಾರರಿಗೆ ಆರ್ಥಿಕವಾಗಿ ಹೊರೆ ಹೆಚ್ಚಾಗುತ್ತಿದೆ.

ಲೋಡ್ ಮಾಡಿದ ಕಬ್ಬಿನ ಟ್ರ್ಯಾಕ್ಟರ್ ಜಮೀನಿನಲ್ಲಿ ಸಿಕ್ಕರೆ ಅದನ್ನು ಹೊರತೆಗೆಯಲು ಜೆಸಿಬಿ ತರಬೇಕು ಅದಕ್ಕೆ ಒಂದು ಸಾವಿರ ನೀಡಬೇಕು, ಕಬ್ಬಿಗೆ ಗೊಣ್ಣೆ ಹುಳು ಬಾಧೆ ಸೇರಿದಂತೆ ರೈತರಿಗೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ.

’ಈ ವರ್ಷ ಕಬ್ಬು ಹೆಚ್ಚಿನ ಗರಿ ತೆಗೆದಿದೆ ಗರಿ ತೆಗೆಯಲು ಮುಖ್ಯ ಕಾರಣ ಬಿಸಿಲಿನ ಕೊರತೆ, ಹೆಚ್ಚು ಬಿಸಿಲು ಉಪಯೋಗ ಮಾಡುವ ಬೆಳೆ ಕಬ್ಬು, ಈ ವರ್ಷ ಮಳೆ ಹೆಚ್ಚಾಗಿರುವದರಿಂದ ಬಿಸಿಲು ಕಡಿಮೆ ಆಗಿರುವದರಿಂದ ಕಬ್ಬು ಗರಿ ತೆಗೆದಿದೆ, ಗರಿ ತೆಗೆದ ತಕ್ಷಣ ಕಬ್ಬು ಕಟಾವು ಮಾಡಿದರೆ ಬಹಳ ವ್ಯತ್ಯಾಸ ಆಗುವದಿಲ್ಲ, ದಿನಗಳು ಕಳೆದಂತೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ’ ಎನ್ನುತ್ತಾರೆ ಕೃಷಿ ತಜ್ಞ ಬಸವರಾಜ ಗಿರಗಾಂವಿ

ಕೆಲ ಕಬ್ಬಿನ ತಳಿಗಳು ಗರಿ ತೆಗೆಯುತ್ತವೆ. ಗರಿ ತೆಗೆಯುವ ಕಬ್ಬಿನ ತಳಿಗಳು ಹಳೆಯ ತಳಿಗಳು, ಇತ್ತೀಚೆಗೆ ಗರಿ ತೆಗೆಯದಂತಹ ಹಲವಾರು ತಳಿಗಳನ್ನು ಸಂಶೋದನೆ ಮಾಡಲಾಗಿದೆ ಅವುಗಳನ್ನು ರೈತರು ಬಳಸಬೇಕು

ಸಿದ್ದಪ್ಪ ಪಟ್ಟಿಹಳ್ಳ, ಸಹಾಯಕ ಕೃಷಿ ನಿರ್ದೇಶಕ, ಜಮಖಂಡಿ

ಜಮಖಂಡಿ: ತಾಲ್ಲೂಕಿನ ಹುಲ್ಯಾಳ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೆಳೆದ ಕಬ್ಬು ಗರಿ ತೆಗೆದಿರುವದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.