ತೇರದಾಳ: ಬೇರೆ ಕಟ್ಟಡಗಳ ನಿರ್ಮಾಣದಲ್ಲಿ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳುವಂತೆ ಶಾಲೆಗಳ ನಿರ್ಮಾಣದಲ್ಲಿಯೂ ತುಸು ಹೆಚ್ಚಾಗಿಯೇ ಮುತುವರ್ಜಿ ವಹಿಸಬೇಕು. ಅಲ್ಲಿ ಜಗತ್ತನ್ನು ಬೆಳಗುವ ಭಾವಿ ಪ್ರಜೆಗಳ ವಿದ್ಯಾಭ್ಯಾಸ ನಡೆಯುತ್ತಿರುತ್ತದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಇಲ್ಲಿನ ಹನಗಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೆ ಸಂಖ್ಯೆ 13/ಅ ನಲ್ಲಿ₹ 5 ಕೋಟಿ ಅನುದಾನದಲ್ಲಿ ನಿರ್ಮಾಣವಾಗಲಿರುವ ಮೌಲಾನಾ ಆಜಾದ್ ಮಾದರಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯಕ್ರಮ ನಡೆಯಿತು.
ಅಲ್ಪಸಂಖ್ಯಾತರ ಇಲಾಖೆಯ ತಾಲ್ಲೂಕು ವಿಸ್ತರಣಾಧಿಕಾರಿ ಸಂತೋಷ ಬಾಡಗಿ ಮಾತನಾಡಿ, ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಪ್ರತ್ಯೇಕ ಶಾಲೆಗಳನ್ನು ನಿರ್ಮಾಣ ಮಾಡುವ ಮೂಲಕ ಅವರ ಪ್ರಗತಿಗೆ ಸರ್ಕಾರ ಶ್ರಮಿಸುತ್ತಿದೆ ಎಂದರು
ತೇರದಾಳ ಪುರಸಭೆ ಮುಖ್ಯಾಧಿಕಾರಿ ಎಫ್.ಬಿ.ಗಿಡ್ಡಿ, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುರೇಶ ಅಕಿವಾಟ, ಮುಖಂಡರಾದ ಧರೇಶ ಹುದ್ದಾರ, ಸಚೀನ ಕೊಡತೆ, ಶಂಕರ ಕುಂಬಾರ, ಅಲ್ಲಾಭಕ್ಷ ಅಲಾಸ, ಅನೀಲ ಗುಬಚೆ, ಸದಾಶಿವ ಸಿಂಗೇ, ಮುನ್ನಾ ತಾಂಬೋಳಿ, ಪ್ರಕಾಶ ಕಾಲತಿಪ್ಪಿ, ರಮಜಾನ ನಾಯಕವಾಡಿ, ವಸಂತ ಧರೆನ್ನವರ, ರಿಯಾಜ ತಾಂಬೋಳಿ, ಶಾಲಾ ಮುಖ್ಯಗುರು ಎಸ್.ಎಸ್.ನಿಡಗುಂದಿ ಸೇರಿದಂತೆ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.