
ಗುಳೇದಗುಡ್ಡ: ಪಟ್ಟಣದ ಬಸ್ ನಿಲ್ದಾಣ ಸಮೀಪ ಪುರಸಭೆ ವ್ಯಾಪ್ತಿಯಲ್ಲಿರುವ ಕಂದಗಲ್ ಹನುಮಂತರಾಯರ ರಂಗಮಂದಿರದ ಆವರಣದಲ್ಲಿ ಕಟಿಂಗ್ ಶಾಫ್ ಆರಂಭವಾಗಿದೆ. ಇದು ಸರಿಯಲ್ಲ ಎಂದು ಬಯಲಾಟ ಕಲಾವಿದ ಶ್ರೀಕಾಂತ ಹುನಗುಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಪುರಸಭೆ ಮುಖ್ಯಾಧಿಕಾರಿಗಳು ಗಮನ ಹರಿಸದೇ ಇರುವುದು ಇದಕ್ಕೆಲ್ಲಾ ಕಾರಣ. ಅವರ ಬೇಜಾಬ್ದಾರಿತನವು ಕಾರಣವಾಗಿದೆ. ಸುಮ್ಮನೆ ಬಿಟ್ಟರೆ ರಂಗಮಂದಿರ ಇನ್ನೂ ಅತಿಕ್ರಮಣವಾಗುತ್ತದೆ. ಈಗಾಗಲೇ ಅದು ಪೂರ್ಣಗೊಳ್ಳದೆ ಶಿಥಿಲಾವಸ್ಥೆಯಲ್ಲಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸದಿದ್ದರೆ ಎಲ್ಲ ಕಲಾವಿದರು ಸೇರಿ ಪ್ರತಿಭಟಿಸಲಾಗುವುದೆಂದು ಹೇಳಿದರು.
‘ಕಟಿಂಗ್ ಶಾಫ್ ಆರಂಭಿಸಿರುವುದು ನನ್ನ ಗಮನಕ್ಕೆ ಬಂದಿಲ್ಲಾ ಆರಂಭಿಸಿದ್ದರೆ ಸೂಕ್ತ ಕ್ರಮ ಜರುಗಿಸಿ ತೆಗೆಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎ.ಎಚ್.ಮುಜಾವರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.