ಬಾದಾಮಿ: ಬೆಣ್ಣೆ ಹಳ್ಳದ ಪ್ರವಾಹದಿಂದ ಮಲಪ್ರಭಾ ನದಿಯ ಪ್ರವಾಹ ಹೆಚ್ಚಾಗಿ, ನದಿ ದಂಡೆಯ ಹೊಲಗಳಿಗೆ ನೀರು ನುಗ್ಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಸಂಪೂರ್ಣವಾಗಿ ಜಲಾವೃತವಾಗಿದೆ.
ಶುಕ್ರವಾರ ಬೆಳಿಗ್ಗೆ ಚೊಳಚಗುಡ್ಡ ಗ್ರಾಮದ ಸಮೀಪ ಬಾಗಲಕೋಟೆ–ಗದಗ ರಸ್ತೆಯಲ್ಲಿನ ಸೇತುವೆಗೆ ತಟ್ಟುವಂತೆ ಪ್ರವಾಹ ಬಂದಿದೆ. ರಸ್ತೆಯಲ್ಲಿ ವಾಹನಗಳ ಸಂಚಾರ ಆರಂಭವಿದೆ. ಜನರು ಗುಂಪು ಗುಂಪಾಗಿ ಬಂದು ಮಲಪ್ರಭೆ ನದಿ ಪ್ರವಾಹವನ್ನು ವೀಕ್ಷಿಸಿದರು.
ಶಿವಯೋಗಮಂದಿರ– ಮಂಗಳೂರು ರಸ್ತೆ ಸೇತುವೆ ಸಂಪೂರ್ಣವಾಗಿ ಜಲಾವೃತವಾಗಿ ರಸ್ತೆ ಸಂಚಾರ ಸ್ಥಗಿತವಾಗಿದೆ.
ಗುರುವಾರ ಬೆಳಿಗ್ಗೆ ಬೆಣ್ಣೆ ಹಳ್ಳದ ನೀರು ಮಲಪ್ರಭೆಗೆ ನದಿಗೆ ಸೇರಿದ್ದು ಶುಕ್ರವಾರವೂ ಪ್ರವಾಹ ಮುಂದುವರಿದಿದೆ. ನದಿ ದಂಡೆಯ ಹೆಬ್ಬಳ್ಳಿ, ಮುಮರಡ್ಡಿಕೊಪ್ಪ, ಜಕನೂರ, ಬೂದಿಹಾಳ, ನೀರಲಗಿ, ಕಾತರಗಕಿ, ಖ್ಯಾಡ, ನಸಬಿ, ಹಿರೇನಸಬಿ, ನವಿಲುಹೊಳೆ, ಚಿಮ್ಮಲಗಿ, ಶಿರಬಡಗಿ ಗ್ರಾಮಗಳ ರೈತರು ಮುಂಗಾರು ಮಳೆಗೆ ಬಿತ್ತಿದ ಬೆಳೆಗಳೆಲ್ಲ ಹಾನಿಯಾಗಿವೆ.
ತಹಶೀಲ್ದಾರ್ ಮಧುರಾಜ ನದಿ ದಂಡೆಯ ಗ್ರಾಮಗಳಿಗೆ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.