ADVERTISEMENT

ತಂಬಾಕು ಸೇವನೆಯಿಂದ ಕ್ಯಾನ್ಸರ್ ಸಾಧ್ಯತೆ: ಜಿ. ಬಿ. ಭದ್ರಣ್ಣವರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 3:14 IST
Last Updated 6 ಫೆಬ್ರುವರಿ 2026, 3:14 IST
<div class="paragraphs"><p><strong>ತಂಬಾಕು ಬಳಕೆ:</strong> ತಂಬಾಕಿನಿಂದ ಹೊರಬರುವ ಹೊಗೆಯು ಸುಮಾರು 7.000 ರಾಸಾಯನಿಕಗಳನ್ನು ಹೊಂದಿದೆ. ಅವುಗಳಲ್ಲಿ ಸುಮಾರು 70 ರಾಸಾಯನಿಕಗಳು ಶ್ವಾಸಕೋಶದ ಕೋಶಗಳ ಡಿಎನ್ಎಗೆ ಹಾನಿಯನ್ನುಂಟು ಮಾಡುವ ಕ್ಯಾನ್ಸರ್ ಜನಕಗಳಾಗಿವೆ. ಇದರಿಂದ ಉಂಟಾಗುವ ಹಾನಿ ಮಾತ್ರ ದೀರ್ಘಾವಧಿಯದ್ದು.</p></div>

ತಂಬಾಕು ಬಳಕೆ: ತಂಬಾಕಿನಿಂದ ಹೊರಬರುವ ಹೊಗೆಯು ಸುಮಾರು 7.000 ರಾಸಾಯನಿಕಗಳನ್ನು ಹೊಂದಿದೆ. ಅವುಗಳಲ್ಲಿ ಸುಮಾರು 70 ರಾಸಾಯನಿಕಗಳು ಶ್ವಾಸಕೋಶದ ಕೋಶಗಳ ಡಿಎನ್ಎಗೆ ಹಾನಿಯನ್ನುಂಟು ಮಾಡುವ ಕ್ಯಾನ್ಸರ್ ಜನಕಗಳಾಗಿವೆ. ಇದರಿಂದ ಉಂಟಾಗುವ ಹಾನಿ ಮಾತ್ರ ದೀರ್ಘಾವಧಿಯದ್ದು.

   

ಚಿತ್ರ: ಗೆಟ್ಟಿ

ಹುನಗುಂದ: ತಂಬಾಕು ಸೇವನೆಯಿಂದ ಯುವ ಜನಾಂಗ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂಬಾಕು ಸೇವಿಸುವುದರಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ. ಬಿ. ಭದ್ರಣ್ಣವರ ಹೇಳಿದರು

ADVERTISEMENT

ನಗರದ ಸಾರ್ವಜನಿಕ ಆಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಕುಟುಂಬದ ರಕ್ಷಣೆ ಜೊತಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಎಲ್ಲರೂ ಸೇರಿಕೊಂಡು ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.

ನಗರದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಜಾಥಾಗೆ ತಾಲ್ಲೂಕು ಆರೋಗ್ಯ ಅಧಿಕಾರಿ ಎಸ್.ಎಸ್. ಅಂಗಡಿ ಚಾಲನೆ ನೀಡಿದರು. ನಂತರ ವಿಜಯ ಮಹಾಂತೇಶ ವೃತ್ತದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ, ಕ್ಯಾನ್ಸರ್‌ ಬಗ್ಗೆ ಸಾರ್ವಜನಿರಲ್ಲಿ ಜಾಗೃತಿ ಮೂಡಿಸಿದರು.

ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಮಂಜುನಾಥ ಅಂಕೋಲ್ಕರ್, ಗ್ರೇಡ್ 2 ತಹಶೀಲ್ದಾರ್ ಎಸ್.ಎ. ಮುಂಡೇವಾಡಿ, ಯಮನಪ್ಪ ಮಾದರ, ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.