ಇಳಕಲ್: ‘ಅಂಗವಿಕಲರು ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ನೀಡುವ ತರಬೇತಿ ಹಾಗೂ ಸೌಲಭ್ಯಗಳನ್ನು ಬಳಿಸಿಕೊಂಡು ಸ್ವಾವಲಂಬಿಗಳಾಗಬೇಕು’ ಎಂದು ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ದಿ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಘು ಹುಬ್ಬಳ್ಳಿ ಹೇಳಿದರು.
ನಗರದ ನವಜೀವನ ವೃದ್ದಾಶ್ರಮದ ಆವರಣದಲ್ಲಿ ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ದಿ ಸೇವಾ ಸಂಸ್ಥೆ ಹಾಗೂ ಟ್ರೆನ್ ಸಂಸ್ಥೆಯ ಸಹಯೋಗದಲ್ಲಿ ಪಂಕ್ ಯೋಜನೆಯಡಿ ಉಚಿತವಾಗಿ ಕಂಪ್ಯೂಟರ್ ಕೌಶಲ್ಯ ತರಬೇತಿ ಪಡೆದ ಅಂಗವಿಕಲರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಅಂಗವಿಕಲರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂಬೈಯ ಟ್ರೆನ್ ಸಂಸ್ಥೆ ಊಟ, ವಸತಿ ನೀಡಿ, ರಿಟೈಲ್ ಉದ್ಯಮದ ಬಗ್ಗೆ ಮಾಹಿತಿ, ಕಂಪ್ಯೂಟರ್ ತರಬೇತಿ ಹಾಗೂ ಕೌಶಲ್ಯ ತರಬೇತಿ ನೀಡಿ ಉದ್ಯೋಗ ದೊರಕಿಸಿಕೊಡಲು ಪ್ರೋತ್ಸಾಹ ನೀಡುತ್ತಿದೆ. ಪಂಕ್ ಯೋಜನೆಯಡಿ ತರಬೇತಿ ಪಡೆದವರು ಉದ್ಯೋಗ ಮಾಡುವ ಮೂಲಕ ಆರ್ಥಿಕವಾಗಿ ಬೆಳವಣಿಗೆಯಾಗಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತರಬೇತಿ ಪಡೆದ 25 ಅಂಗವಿಕಲರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪಂಕ್ ಯೋಜನೆಯ ಮುಖ್ಯ ತರಬೇತಿದಾರ ಮಲ್ಲಪ್ಪ ಎಂ, ತರಬೇತಿದಾರ ಎಚ್.ಎಚ್.ಬೇಪಾರಿ, ಸಮಾಲೋಚಕಿ ಭಾಗ್ಯಶ್ರೀ, ಯಲ್ಲಪ್ಪ ಬಾಲಾಗಾವಿ, ಮಹಾಂತೇಶ ಗೊರಜನಾಳ. ಸುಲೇಮಾನ ಚೋಪದಾರ, ಆಶಾದೀಪ ಸಂಸ್ಥೆಯ ಈರಣ್ಣ ಮನ್ನಾಪೂರ, ಮುತ್ತು ಸಂಕಣ್ಣವರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.