ADVERTISEMENT

ಹೆಬ್ಬಳ್ಳಿ: ಮಹಿಳೆಯರಿಗೆ ವಾತ್ಸಲ್ಯ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 7:04 IST
Last Updated 7 ಫೆಬ್ರುವರಿ 2026, 7:04 IST
ಬಾದಾಮಿ ಸಮೀಪದ ಹೆಬ್ಬಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಾಸಾಶನ ಫಲಾನುಭವಿ ನಿರ್ಗತಿಕ ಮಹಿಳೆಯರಿಗೆ ಯೋಜನಾಧಿಕಾರಿ ನಾಗರಾಜ ಹದ್ಲಿ ವಾತ್ಸಲ್ಯ ಕಿಟ್ ವಿತರಿಸಿದರು
ಬಾದಾಮಿ ಸಮೀಪದ ಹೆಬ್ಬಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಾಸಾಶನ ಫಲಾನುಭವಿ ನಿರ್ಗತಿಕ ಮಹಿಳೆಯರಿಗೆ ಯೋಜನಾಧಿಕಾರಿ ನಾಗರಾಜ ಹದ್ಲಿ ವಾತ್ಸಲ್ಯ ಕಿಟ್ ವಿತರಿಸಿದರು   

ಹೆಬ್ಬಳ್ಳಿ (ಬಾದಾಮಿ): ಹೆಬ್ಬಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಾಸಾಶನ ಫಲಾನುಭವಿ ನಿರ್ಗತಿಕ ಮಹಿಳೆಯರಿಗೆ ಯೋಜನಾಧಿಕಾರಿ ನಾಗರಾಜ ಹದ್ಲಿ ವಾತ್ಸಲ್ಯ ಕಿಟ್ ವಿತರಿಸಿದರು.

ತಾಲ್ಲೂಕು ಘಟಕದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಗುರುವಾರ ನಿತ್ಯ ಬಳಸುವ ವಸ್ತುಗಳು, ಬಟ್ಟೆ ಮತ್ತು ಆಹಾರ ಪದಾರ್ಥಗಳನ್ನು ಸಂಗವ್ವ ಹಡಪದ ಮತ್ತು ರುಕ್ಮವ್ವ ಮಹಿಳೆಯರಿಗೆ ವಿತರಿಸಲಾಯಿತು.

ಸಂಸ್ಥೆಯ ಮೇಲ್ವಿಚಾರಕಿ ಪ್ರತಿಭಾ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ರತ್ನಾ ಎಂ, ಸೇವಾ ಪ್ರತಿನಿಧಿ ಜಯಶ್ರೀ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.