ಹುನಗುಂದ: ‘ನಿರಾಣಿ ಸಮೂಹ ಸಂಸ್ಥೆ ಸಾಮಾಜಿಕ ಸೇವೆ ಜೊತೆಗೆ ರೈತರ ಪ್ರಗತಿಗೆ ಸದಾ ಬೆನ್ನಲುಬಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ಪಟ್ಟಣದ ಕಡಪಟ್ಟಿ ಸಂಕೀರ್ಣದಲ್ಲಿ ಭಾನುವಾರ ಆರಂಭಗೊಂಡ ವಿಶಾಲ (ಎಂಆರ್ ಎನ್) ಸೌಹಾರ್ದ ಪತ್ತಿನ ಸಹಕಾರ ಸಂಘದ 8ನೇ ಶಾಖೆ ಕಚೇರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಸಂಘದಲ್ಲಿ 6,077 ಸದಸ್ಯರು, ₹2.38 ಕೋಟಿ ಶೇರು ಬಂಡವಾಳ, ₹109.24 ಕೋಟಿ ಸಾಲ ನೀಡಿದ್ದು, 2024-25ನೇ ಸಾಲಿನಲ್ಲಿ ₹1.26 ಕೋಟಿ ಲಾಭ ಗಳಿಸಿದೆ. ಪಟ್ಟಣದಲ್ಲಿ 8ನೇ ಶಾಖೆ ಆರಂಭಿಸಿದ್ದು, ರೈತರು ಮತ್ತು ವ್ಯಾಪಾರಸ್ಥರು ಸಂಘದ ಸದುಪಯೋಗ ಪಡೆದುಕೊಳ್ಳಿ’ ಎಂದರು.
ಅಮೀನಗಡದ ಶಂಕರ ರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಹಣ ಪಡೆಯುವಾಗಿನ ವಿಶ್ವಾಸ, ಹಣ ಮರಳಿಸುವಾಗಲೂ ಇರಲಿ. ನಿರಾಣಿ ಸಮೂಹ ಸಂಸ್ಥೆ ಹೆಚ್ಚಿನ ಪ್ರಗತಿ ಹೊಂದಲಿ’ ಎಂದು ಹೇಳಿದರು.
ಶಾಸಕ ವಿಜಯಾನಂದ ಕಾಶಪ್ಪನವರ ವಿಶಾಲ ಸೌಹಾರ್ದ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿನ ಗಣಕಯಂತ್ರಕ್ಕೆ ಚಾಲನೆ ನೀಡಿದರು.
ಪುರತಗೇರಿಯ ಕೈಲಾಸಲಿಂಗ ಶಿವಾಚಾರ್ಯ, ಮಾಜಿ ಶಾಸಕ ಎಸ್. ಜಿ.ನಂಜಯ್ಯನಮಠ, ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಉಪಾಧ್ಯಕ್ಷೆ ರಾಜಮ್ಮ ಬದಾಮಿ, ಶಕುಂತಲಾ ಗಂಜಿಹಾಳ, ಮುಖಂಡರಾದ ಜಿ.ಜಿ.ಪಾಟೀಲ, ಎಲ್.ಎಂ.ಪಾಟೀಲ, ಶೇಖರಪ್ಪ ಬಾದವಾಡಗಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.