ಬೀಳಗಿ: ಅದೃಷ್ಟ ಯಾವಾಗಲೂ ಶ್ರಮಜೀವಿಗಳ ಬೆನ್ನು ಹತ್ತುತ್ತದೆ. ವಿಶ್ವಕರ್ಮರು ಶ್ರಮಜೀವಿಗಳಾಗಿದ್ದು ಸದಾಕಾಲ ಕಾಯಕವನ್ನೇ ನಂಬಿ ಬದುಕಿರುವ ಜನಾಂಗ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಹೇಳಿದರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಹಶೀಲ್ದಾರ್ ವಿನೋದ ಹತ್ತಳ್ಳಿ ಮಾತನಾಡಿ, ವಿಶ್ವಕರ್ಮರು ಆಧುನಿಕ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಈ ನಾಡಿನ ವಾಸ್ತುಶಿಲ್ಪ ಕಲೆಗೆ ವಿಶ್ವಕರ್ಮರ ಕೊಡುಗೆ ಅಪಾರ ಎಂದರು.
ನಿವೃತ್ತ ಶಿಕ್ಷಕ ಗಣೇಶ ಹೊರಪೇಟ ಮಾತನಾಡಿ, ವಿಶ್ವಕರ್ಮರು ಜ್ಞಾನವುಳ್ಳವರು, ಕಲಾವಿದರು ಆದರೆ ಪ್ರಸ್ತುತ ವಿಶ್ವಕರ್ಮ ನಿಗಮಕ್ಕೆ ಅಧ್ಯಕ್ಷರು, ನಿರ್ದೇಶಕರಿಲ್ಲದೆ ಅನಾಥವಾಗಿದೆ. ಶೀಘ್ರವೇ ನೇಮಕ ಮಾಡಲು ಸರ್ಕಾರಕ್ಕೆ ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುತ್ತು ಬೊರ್ಜಿ, ಮುಖ್ಯಾಧಿಕಾರಿ ದೇವಿಂದ್ರ ಧನಪಾಲ, ಸಿಪಿಐ ಹನಮಂತ ಸಣಮನಿ, ಮುರನಾಳದ ಗುರುನಾಥ ಸ್ವಾಮೀಜಿ, ಸಮಾಜದ ಅಧ್ಯಕ್ಷ ನಾಗರಾಜ ಟಂಕಸಾಲಿ, ಉಪಾಧ್ಯಕ್ಷ ಶಂಕರ ಬಡಿಗೇರ, ಕೆ.ಎನ್.ಬಡಿಗೇರ, ಅನಿಲ ಬಡಿಗೇರ, ಎಸ್.ಎಸ್.ಬಡಿಗೇರ, ಕೇಶವ ಬಡಿಗೇರ, ಕಿರಣ ಬಡಿಗೇರ, ಮೌನೇಶ ಬಡಿಗೇರ ಇದ್ದರು. ವಿ.ಆರ್.ಹಿರೇನಿಂಗಪ್ಪನವರ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.