ADVERTISEMENT

ಜನಪರವಾಗಿ ಕೆಲಸ ನಿರ್ವಹಿಸಿ: ಉಮಾಶ್ರೀ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 14:05 IST
Last Updated 31 ಜುಲೈ 2024, 14:05 IST
ಮಹಾಲಿಂಗಪುರದ ಪುರಸಭೆ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಉಮಾಶ್ರೀ ಮಾತನಾಡಿದರು
ಮಹಾಲಿಂಗಪುರದ ಪುರಸಭೆ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಉಮಾಶ್ರೀ ಮಾತನಾಡಿದರು   

ಮಹಾಲಿಂಗಪುರ: ಪುರಸಭೆ ಅಧಿಕಾರಿಗಳು ಪಟ್ಟಣದ ಎಲ್ಲ ವಾರ್ಡ್‍ಗಳಲ್ಲಿ ಜನಪರವಾಗಿ ಕೆಲಸ ನಿರ್ವಹಿಸಬೇಕು. ತಾರತಮ್ಯ ಮಾಡದೇ ಸಾರ್ವಜನಿಕರ ಹಿತಾಸಕ್ತಿಗೆ ಸ್ಪಂದಿಸಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಸೂಚನೆ ನೀಡಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುರಸಭೆ ಸಿಬ್ಬಂದಿ ಸ್ವತಃ ವಾರ್ಡ್‌ಗೆ ತೆರಳಿ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಮೇಲಾಧಿಕಾರಿಗಳು ಸೂಚನೆಯನ್ವಯ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಬೇಕು. ಸೌಲಭ್ಯಗಳನ್ನು ಅಧಿಕಾರಿಗಳು ಕಲ್ಪಿಸಬೇಕು. ನಿರೀಕ್ಷೆ ಇಟ್ಟುಕೊಳ್ಳದೇ ಸಾರ್ವಜನಿಕರ ಸೇವೆ ಮಾಡಬೇಕು ಎಂದರು.

ADVERTISEMENT

ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಭರವಸೆ ನೀಡಿದರು. ಪುರಸಭೆ ವತಿಯಿಂದ ಉಮಾಶ್ರೀ ಅವರಿಗೆ ಪೌರಸನ್ಮಾನ ಮಾಡಲಾಯಿತು.

ಅರ್ಜುನ ದೊಡಮನಿ, ಸಿರಾಜ ಪಾಂಡು, ಸೈಯದ್‍ಅಲಿ ಶೇಖ, ಚನಬಸು ಹುರಕಡ್ಲಿ, ಮಹಾಲಿಂಗ ಭಜಂತ್ರಿ, ವಿಠ್ಠಲ ಸಂಶಿ, ರಾಜೇಶ ಭಾವಿಕಟ್ಟಿ ಇತರರು ಅಹವಾಲು ಸಲ್ಲಿಸಿದರು. ಪುರಸಭೆ ಸದಸ್ಯರಾದ ಬಲವಂತಗೌಡ ಪಾಟೀಲ, ಶೇಖರ ಅಂಗಡಿ, ಅಧಿಕಾರಿಗಳಾದ ಎಸ್.ಎನ್.ಪಾಟೀಲ, ಸಿ.ಎಸ್.ಮಠಪತಿ, ಎಂ.ಎಂ.ಮುಗಳಖೋಡ, ಸಿದ್ದು ಅಳ್ಳಿಮಟ್ಟಿ, ರಾಜು ಹೂಗಾರ, ವಿ.ಜಿ.ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.