ADVERTISEMENT

ಅಜಾತಶತ್ರುವಿಗೆ ಗಣ್ಯರ,ಅಭಿಮಾನಿಗಳ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 7:45 IST
Last Updated 11 ಫೆಬ್ರುವರಿ 2011, 7:45 IST

ಕೂಡ್ಲಿಗಿ:  ಸರಳ, ಸಜ್ಜನಿಕೆಯ ರಾಜಕಾರಣಿ ಎಂದೇ ಹೆಸರಾಗಿದ್ದ ಎಂ.ಪಿ.ಪ್ರಕಾಶ್‌ರ ನಿಧನಕ್ಕೆ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಗುರುವಾರ ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ವ್ಯಕ್ತಪಡಿಸಿತು. ಎಂ.ಪಿ.ಪ್ರಕಾಶ್‌ರ ನಿಧನದಿಂದಾಗಿ ನಾಡು ರಾಜಕೀಯ, ಸಾಂಸ್ಕೃತಿಕ ಲೋಕದ ಧೀಮಂತ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಜನ್ನು ಸಂತಾಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಯರಾಮನಾಯಕ್, ಕ್ಯಾರಿ ರಮೇಶ್, ಎಚ್. ವೀರಭದ್ರಪ್ಪ, ಮಲ್ಲಾಪುರ ಭರಮಪ್ಪ, ಸಿ.ಬಿ.ಸಿದ್ಧೇಶ ಉಪಸ್ಥಿತರಿದ್ದರು.

ಸಂತಾಪ:  ಜಿ.ಪಂ ಸದಸ್ಯರಾದ ಕೆ.ಎಂ. ಶಶಿಧರ್, ಸಾವಿತ್ರಮ್ಮ ವೀರಭದ್ರಪ್ಪ, ಧುರೀಣರಾದ ಸೂಲದಹಳ್ಳಿ ರಾಜಣ್ಣ, ಗುಂಡುಮುಣುಗು ತಿಪ್ಪೇಸ್ವಾಮಿ, ಸಾವಜ್ಜಿ ರಾಜೇಂದ್ರಪ್ರಸಾದ್, ಕೆ.ಎಂ.ತಿಪ್ಪೇಸ್ವಾಮಿ, ವಕೀಲರಾದ ಗುರುಸಿದ್ದನಗೌಡ, ಕೊತ್ತಲ ಆಂಜನೇಯ ಕಲಾ ಸಂಘದ ಬ್ಯಾಳಿ ಶಿವಪ್ರಸಾದಗೌಡ, ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಕಲಾ ಸಂಘದ ಬಿ.ಜಿ.ಲಕ್ಷ್ಮಿ, ಅಂಜಿನಮ್ಮ, ವೀಣಾ ಕಲಾ ಸಂಘದ ವೆಂಕಮ್ಮ, ದುರುಗಮ್ಮ, ವಿರುಪಾಪುರದಾ ನಾಗರತ್ನ, ಆರಾಧ್ಯಮಠದ ಬಸವರಾಜಸ್ವಾಮಿ, ಎಸ್.ವೀರಭದ್ರಪ್ಪ ಪ್ರಕಾಶ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

‘ಪಾರದರ್ಶಕತ್ವದ ಸಂಕೇತ’
ಕೊಟ್ಟೂರು: ಮುತ್ಸದ್ದಿ  ರಾಜಕಾರಣಿ ಎಂ.ಪಿ. ಪ್ರಕಾಶ ಮತ್ತು ರಂಗಭೂಮಿ ಹಿರಿಯ ನಟ, ನಿರ್ದೇಶಕ ಗುಡಗೇರಿ ಬಸವರಾಜ್ ಅವರ ನಿಧನಕ್ಕೆ ಸ್ಥಳೀಯ ಸಂಘ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿವೆ.

ರಾಜಕಾರಣದಲ್ಲಿ ಪಾರದರ್ಶಕತ್ವಕ್ಕೆ ಸಂಕೇತ ವಾಗಿದ್ದ ಎಂ.ಪಿ. ಪ್ರಕಾಶ ನಿಧನದಿಂದ ನಾಡಿನ ರಾಜಕಾರಣಕ್ಕೆ ತುಂಬಲಾಗದ ನಷ್ಟವಾಗಿದ್ದರೆ, ಗುಡಗೇರಿ ಬಸವರಾಜ್  ನಿಧನದಿಂದಾಗಿ ರಂಗಭೂಮಿ ಬಡವಾಗಿದೆ ಎಂದು ಕಲಾ ಕೇಂದ್ರದ ಅಧ್ಯಕ್ಷ ಎಂ.ಎಂ.ಜೆ. ಸತ್ಯಪ್ರಕಾಶ ಮತ್ತು ಸಿನಿಮಾ ನಟ ಸುಧಾಕರ ಪಾಟೀಲ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ನಮ್ಮಂತಹ ಯುವಕರಿಗೆ ಎಂ.ಪಿ. ಪ್ರಕಾಶ ಮಾದರಿ ರಾಜಕಾರಣಿ, ಅವರ ರಾಜಕೀಯ ಮುತ್ಸದ್ದಿತನ, ದೂರದೃಷ್ಟಿ ನಮಗೆಲ್ಲ ಆದರ್ಶವಾಗಿದೆ ಎಂದು ಸಮಾಜ ಸೇವಕ ಹರಾಳು ಅಶೋಕ ಹೇಳಿದ್ದಾರೆ.

ಗುತ್ತಿಗೆದಾರ ರಾಜೇಂದ್ರ ಪ್ರಸಾದ್, ದೇವರಮನಿ ಶಿವಚರಣ, ಕೆ. ಅಯ್ಯನಹಳ್ಳಿ ತಾ.ಪಂ. ಸದಸ್ಯ ಎ.ಎಂ. ಗುರುಪ್ರಸಾದ್, ಎಂ.ಪಿ. ಪ್ರಕಾಶ ಕೇವಲ ರಾಜಕಾರಣಿ ಆಗಿರಲಿಲ್ಲ. ಅವರಲ್ಲಿ ಸಾಹಿತ್ಯ ಸಂಗೀತ, ಕಲೆ ಸಮ್ಮಿಳಿತವಾಗಿತ್ತು ಎಂದು ಬಣ್ಣಿಸಿದ್ದಾರೆ.

ಇದೇ ತೆರನಾಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಕಾಸಲ ಸಾವಿತ್ರಮ್ಮ, ಉಪಾಧ್ಯಕ್ಷ ಹರಪನಹಳ್ಳಿ ಗುರುಬಸವರಾಜ್, ಸದಸ್ಯರಾದ ಕಾಮಶೆಟ್ಟಿ ಕೊಟ್ರೇಶ, ಹುಡೇದ್ ಶಂಕ್ರಪ್ಪ ಲೇಖಕ ಮತ್ತಿಹಳ್ಳಿ ಪ್ರಕಾಶ, ತಿಪ್ಪಜ್ಜಿ ರಾಜು ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಹಿತರಕ್ಷಕ ಸಂಘದ ನಮನ
ಕಂಪ್ಲಿ: ಸ್ಥಳೀಯ ಕನ್ನಡ ಹಿತರಕ್ಷಕ ಸಂಘ ಪದಾಧಿಕಾರಿಗಳು ಬುಧವಾರ ಸಂಘದ ಕಚೇರಿಯಲ್ಲಿ ಸಭೆ ಸೇರಿ ಮಾಜಿ ಸಚಿವ ಎಂ.ಪಿ. ಪ್ರಕಾಶ್ ಮತ್ತು ರಂಗಭೂಮಿ ಕಲಾವಿದ ಗುಡಗೇರಿ ಬಸವರಾಜ ನಿಧನಕ್ಕೆ ಸಂತಾಪ ಸೂಚಿಸಿದರು.

ಸಂಘದ ಗೌರವಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಅಧ್ಯಕ್ಷ ಬಿ. ಅಂಬಣ್ಣ, ಕೆ. ಆನಂದಮೂರ್ತಿ, ಮಾ. ಶ್ರೀನಿವಾಸ, ಕೆ. ಯಂಕಾರೆಡ್ಡಿ, ಜಿ.ಜಿ. ಆನಂದಮೂರ್ತಿ, ಸಿ. ಯಂಕಪ್ಪ, ರ.ಹ.ರುದ್ರಪ್ಪ, ಕವಿತಾಳು ಬಸವರಾಜ, ಕೆ. ಮೆಹಬೂಬ್, ಕರೇಕಲ್ ಶಂಕ್ರಪ್ಪ, ಬಿ. ಹುಸೇನ್‌ಸಾಬ್, ಬಂಗಿ ದೊಡ್ಡಮಂಜುನಾಥ, ಹಿ.ಮ. ಗೌರಿಶಂಕರ್ ಇತರರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.