ADVERTISEMENT

ಇತಿಹಾಸದಲ್ಲಿ ಅಪಮಾನ ಅನುಭವಿಸಿದವರು ಮಹಾತ್ಮರೇ

​ಪ್ರಜಾವಾಣಿ ವಾರ್ತೆ
Published 7 ಮೇ 2012, 5:45 IST
Last Updated 7 ಮೇ 2012, 5:45 IST

ಟಿ.ಕಲ್ಲಹಳ್ಳಿ (ಕೂಡ್ಲಿಗಿ): `ಪ್ರಪಂಚದ ಇತಿಹಾಸವನ್ನು ಅವಲೋಕಿಸಿದರೆ, ಅಪಮಾನಗಳನ್ನು ಅನುಭವಿಸಿದವರು ಮಹಾತ್ಮರಾಗಿ ಬೆಳೆದಿರುವುದನ್ನು ಕಾಣಬಹುದು~ ಎಂದು ಲೇಖಕ ಡಾ.ವೆಂಕಟಗಿರಿ ದಳವಾಯಿ ತಿಳಿಸಿದರು.
ಅವರು ಗ್ರಾಮದ ಡಾ.ಅಂಬೇಡ್ಕರ್ ಕಾಲೊನಿಯಲ್ಲಿ ಏರ್ಪಡಿಸಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾ.ಪಂ ಸದಸ್ಯೆ ಎಂ.ವಿಶಾಲಾಕ್ಷಿ  ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಮೈಲೇಶ್ ಬೇವೂರ್ ನಾಮಫಲಕ ಅನಾವರಣಗೊಳಿಸಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ತೆಗ್ಗಿನಕೇರಿ ಕೊಟ್ರೇಶ್, ಅಂಬೇಡ್ಕರ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಕರಿಬಸಪ್ಪ, ಬಡ್ತಿ ಮುಖ್ಯಶಿಕ್ಷಕ ಎಚ್. ಬಸಪ್ಪ ಮಾತನಾಡಿದರು.

ದಸಂಸ ತಾಲ್ಲೂಕು ಸಂಚಾಲಕ ಎಸ್.ದುರುಗೇಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಗೋಕರ್ಣ, ಸದಸ್ಯರಾದ ಸಿ.ಮಹಾಂತೇಶ್, ದೇವೇಂದ್ರಪ್ಪ, ಸಂಘಟನಾ ಸಂಚಾಲಕರಾದ ಹನುಮೇಶ್, ಬಿ.ಟಿ. ಗುದ್ದಿ ದುರುಗೇಶ್, ಗಂಗಣ್ಣ, ಗುಡೇಕೋಟೆ ನಾಗೇಶ್, ಶಿಕ್ಷಕರಾದ ಗುರುಮೂರ್ತಿ, ಗೋವಿಂದಪ್ಪ ಹೊಸೂರು, ಯನ್ನಪ್ಪ, ಜುಮ್ಮೊಬನಹಳ್ಳಿ ಹೊನ್ನೂರಪ್ಪ, ಕಲ್ಲಹಳ್ಳಿ ಎಸ್.ತಿಪ್ಪೇಶ್, ಟಿ.ಶಿವಣ್ಣ, ಬಸವರಾಜ, ಎಎಸ್‌ಐ ಜಿತೇಂದ್ರ, ದಳಪತಿ ಕೆ.ಜಿ.ವೀರೇಶ್ ಮುಂತಾದವರು ಉಪಸ್ಥಿತರಿದ್ದರು.

ಶ್ವೇತಾ, ಗೀತಾ ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕ ಗುರುಮೂರ್ತಿ ಸ್ವಾಗತಿಸಿದರು. ಆರ್.ಯನ್ನಪ್ಪ ವಂದಿಸಿದರು. ಎಚ್.ಬಸಪ್ಪ ನಿರೂಪಿಸಿದರು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವೇಶ್ವರರ ಭಾವಚಿತ್ರಗಳನ್ನು ಮೆರವಣಿಗೆ ಮಾಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.