ADVERTISEMENT

ಕಂಪ್ಲಿ: ರಸ್ತೆ ಅಪಘಾತದಲ್ಲಿ ಒಬ್ಬನ ಸಾವು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 9:15 IST
Last Updated 26 ಏಪ್ರಿಲ್ 2012, 9:15 IST

ಕಂಪ್ಲಿ: ಟಾಟಾ ಗೂಡ್ಸ್ ಕ್ಯಾರಿಯರ್ ವಾಹನ ಡಿಕ್ಕಿ ಸಂಭವಿಸಿ ಯುವಕ ಮೃತಟ್ಟಿರುವ ಘಟನೆ ದೇವಸಮುದ್ರ ಕ್ರಾಸ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.

ಮೃತಪಟ್ಟವನನ್ನು ಕಂಪ್ಲಿ ನಿವಾಸಿ ಬಿ. ಜಗದೀಶ (18) ಎಂದು ಗುರುತಿಸಲಾಗಿದೆ.

ಜಗದೀಶ ತನ್ನ ತಾಯಿ ಗಂಗಮ್ಮ ನೊಂದಿಗೆ ದೇವಸಮುದ್ರಕ್ಕೆ ತೆರಳಿದ್ದನು. ದೇವಸಮುದ್ರ ಕ್ರಾಸ್ ಬಳಿ ಬಸ್ ನಿರೀಕ್ಷಿಸುತ್ತಿದ್ದ ಸಂದರ್ಭದಲ್ಲಿ ರಸ್ತೆ ಕ್ರಾಸ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ತಕ್ಷಣ ಈತನನ್ನು ಬಳ್ಳಾರಿ ವಿಮ್ಸಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗಂಗಮ್ಮ ದೂರು ನೀಡಿದ್ದು, ಪಿಎಸ್‌ಐ ಆನಂದ ಪ್ರಕರಣ ದಾಖಲಿಸಿಕೊಂಡಿದ್ದು, ಸಿಪಿಐ ಹನುಮಂತಪ್ಪ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.