ADVERTISEMENT

ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 6:05 IST
Last Updated 20 ಜುಲೈ 2013, 6:05 IST

ಹಗರಿಬೊಮ್ಮನಹಳ್ಳಿ: ಪ್ರತಿಯೊಬ್ಬರೂ ಕಾನೂನಿನ ಜ್ಞಾನವನ್ನು ಹೊಂದುವ ಮೂಲಕ ಕಾನೂನನ್ನು ಪಾಲಿಸುವುದು ಅವಶ್ಯವಾಗಿದೆ.ಕಾನೂನನ್ನು ಗೌರವಿಸುವುದು ಕರ್ತವ್ಯವಾಗಿದೆ ಎಂದು ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಗೌರವಾನ್ವಿತ ಸದಸ್ಯ ಕಾರ್ಯದರ್ಶಿ ಎ.ಈರಣ್ಣ ಸಲಹೆ ನೀಡಿದರು.

ಪಟ್ಟಣದ ನ್ಯಾಯಾಲಯದ ಆವರಣದ ಬಳಿ ಶುಕ್ರವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ ಹಾಗು ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಗ್ರಾಮೀಣ ಜನರಿಗಾಗಿ ಆಯೋಜಿಸಿರುವ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾನೂನಿನ ಅರಿವಿಲ್ಲದ ಪರಿಣಾಮವಾಗಿ ಗ್ರಾಮೀಣ ಸಮುದಾಯ ಅನವಶ್ಯಕ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು. ಸಾಕ್ಷರತಾ ರಥ ಅವರಲ್ಲಿ ಹೆಚ್ಚಿನ ಕಾನೂನಿನ ಅರಿವು ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.      

ಕಾನೂನಿನ ಅರಿವು ಹೆಚ್ಚಿಸುವುದರ ಜೊತೆಗೆ ಸಮರ್ಪಕ ನ್ಯಾಯ ಪಡೆಯುವ ನಿಟ್ಟಿನಲ್ಲಿ ಕಾನೂನು ಸೇವಾ ಸಮಿತಿಯಿಂದ ದೊರೆಯಬಹುದಾದ ನೆರವು ಕುರಿತು ಪೂರಕ ಮಾಹಿತಿ ನೀಡುವ ಹಿನ್ನೆಲೆಯಲ್ಲಿ ಕಾನೂನು ಸಾಕ್ಷರಥಾ ರಥಕ್ಕೆ ಚಾಲನೆ ನೀಡಲಾಗಿದೆ. ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಸೂಚಿಸಿದರು.

ತಹಶೀಲ್ದಾರ್ ನಾಗರಾಜಭಟ್, ವಕೀಲರ ಸಂಘದ ಅಧ್ಯಕ್ಷ ಬಿ.ವಿ.ಶಿವಯೋಗಿ, ಸರಕಾರಿ ಸಹಾಯಕ ಅಭಿಯೋಜಕ ಬಿ.ಮಂಜುನಾಥ್, ಕನಕೇರಿ ಅಶೋಕ್, ಕೊಟ್ರೇಶ್ ಶೆಟ್ಟರ್, ಗುರುಬಸವರಾಜ್, ಸಿ.ಬಸವರಾಜ್, ಟಿ.ಜಿ.ಎಂ.ಕೊಟ್ರೇಶ್, ಬಾವಿ ಪ್ರಕಾಶ್, ಎಸ್.ಲಿಂಗನಗೌಡ, ಎ.ಶಿವಾನಂದ್, ಸುಭಾಷ್‌ನಾಯ್ಕ, ವಾಸಂತಿ ಸಾಲ್ಮನಿ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.