ADVERTISEMENT

ಕುಸಿದ ರಸ್ತೆ: ಆತಂಕ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 5:38 IST
Last Updated 11 ಅಕ್ಟೋಬರ್ 2017, 5:38 IST
ಬಳ್ಳಾರಿಯ ಈದ್ಗಾ ಮೈದಾನದ ಬದಿಯ ಬೀಡಿ ಕಾರ್ಮಿಕರ ಕಟ್ಟಡದ ಬಳಿ ಕುಸಿದ ಹಳೇ ಬೈಪಾಸ್‌ ರಸ್ತೆಯನ್ನು ಬಾಲಕರು ಕುತೂಹಲದಿಂದ ನೋಡಿದರು
ಬಳ್ಳಾರಿಯ ಈದ್ಗಾ ಮೈದಾನದ ಬದಿಯ ಬೀಡಿ ಕಾರ್ಮಿಕರ ಕಟ್ಟಡದ ಬಳಿ ಕುಸಿದ ಹಳೇ ಬೈಪಾಸ್‌ ರಸ್ತೆಯನ್ನು ಬಾಲಕರು ಕುತೂಹಲದಿಂದ ನೋಡಿದರು   

ಬಳ್ಳಾರಿ: ನಗರದ ಈದ್ಗಾ ಮೈದಾನದ ಬದಿಯ ಬೀಡಿ ಕಾರ್ಮಿಕರ ಕಟ್ಟಡದ ಬಳಿ ಹಳೇ ಬೈಪಾಸ್‌ ರಸ್ತೆ ಸೋಮವಾರ ಬೆಳಗ್ಗೆ 8.30ರ ವೇಳೆಯಲ್ಲಿ ದಿಢೀರನೆ ಹಲವು ಅಡಿಗಳ ಆಳಕ್ಕೆ ಕುಸಿದು ಜನರಲ್ಲಿ ಆತಂಕ ಮೂಡಿಸಿತ್ತು.

‘ಕುಸಿತಕ್ಕೆ ಕಾರಣ ತಿಳಿದುಬಂದಿಲ್ಲ. ಅಲ್ಲಿ ಇತ್ತೀಚೆಗಷ್ಟೇ ಡಾಂಬರೀಕರಣ ಮಾಡಲಾಗಿತ್ತು. ಕುಡಿಯುವ ನೀರಿನ ಪೈಪ್‌ಗೆ ಹಾನಿಯಾಗಿದ್ದು ಅದನ್ನು ತೆರವು ಮಾಡಿ ಹೊಸದನ್ನು ಅಳವಡಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಎಂ.ಕೆ.ನಲ್ವಡಿ ತಿಳಿಸಿದರು.

ಬೆಂಗಳೂರು –ಹೊಸಪೇಟೆ ರಸ್ತೆ ನಡುವೆ ಸಂಪರ್ಕ ಕಲ್ಪಿಸಲು ಈ ಬೈಪಾಸ್‌ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯು ನಿರ್ಮಿಸಿತ್ತು. ಸ್ಥಳಕ್ಕೆ ಮೇಯರ್ ಜಿ.ವೆಂಕಟರಮಣ ಭೇಟಿ ನೀಡಿದ್ದರು. ಸ್ಥಳದಲ್ಲಿ ಬ್ಯಾರಿಕೇಡ್‌ ನಿಲ್ಲಿಸಿದ್ದು, ದುರಸ್ತಿ ನಡೆಯಬೇಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.