ಹೊಸಪೇಟೆ: ಹೊಸಪೇಟೆ ಘಟಕದಿಂದ ನೂರಾರು ಬಸ್‌ಗಳು ಖಾಸಗಿ ಕಾರ್ಯಕ್ರಮವೊಂದಕ್ಕೆ ನೀಡಿದ ಹಿನ್ನೆಲೆಯಲ್ಲಿ ಹೊಸಪೇಟೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು.
ಗದಗನಲ್ಲಿ ನಡೆಯುವ ಮಾಜಿ ಸಚಿವ ಬಿ.ಶ್ರೀರಾಮುಲು ಅವರ 108 ಪ್ರಶ್ನೆಗಳ ಉತ್ತರಕ್ಕಾಗಿ ಉಪವಾಸ ಕಾರ್ಯಕ್ರಮಕ್ಕೆ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹೊಸಪೇಟೆ ಘಟಕದಿಂದ ಸೋಮವಾರ 100ಕ್ಕೂ ಹೆಚ್ಚು ಬಸ್‌ಗಳನ್ನು ನೀಡಿದ ಕಾರಣ ಸಂಜೆ 3 ಗಂಟೆಯಿಂದ ಬಳ್ಳಾರಿ ಮಾರ್ಗ ಸೇರಿದಂತೆ ಬಹುತೇಕ ಬಸ್‌ಗಳ ಸಂಚಾರ ಕಡಿತಗೊಂಡಿತ್ತು.
ಪೂರ್ವ ಸೂಚನೆ ಇಲ್ಲದೆ ಇಲಾಖೆ ಕೈಗೊಂಡ ಕ್ರಮದಿಂದ ಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿ ತುಳುಕುವಂತಾಗಿದ್ದು, ಒಂದಡೆಯಾದರೆ ಶಾಲಾ ಮಕ್ಕಳು ಸೇರಿದಂತೆ ಮಹಿಳೆ ಮತ್ತು ವಯೋವೃದ್ಧರು ಪ್ರಯಾಣಕ್ಕೆ ಬಸ್‌ಗಳಿಲ್ಲದೆ ಪರದಾಡುವಂತಾಗಿತ್ತು. ಇನ್ನು ಆಕ್ರೋಶಗೊಂಡ ಪ್ರಯಾಣಿಕರು ಬೇರಡೆಗಳಿಂದ ಬಂದಿದ್ದ ಬಸ್‌ಗಳ ಸಂಚಾರವನ್ನು ತಡೆಯುವ ಮೂಲಕ ಇಲಾಖೆಯ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸಿದರು.
ಶಾಲಾ ಮಕ್ಕಳ ಪರದಾಟ: ಶಾಲೆಗಳಿಂದ 5ಕ್ಕೆ ಬಸ್ ನಿಲ್ದಾಣಕ್ಕೆ ಬಂದ ಮಕ್ಕಳು ಪ್ರಯಾಣಿಕರು ಬಸ್‌ಗಳಿಲ್ಲದ ಹಾಗೂ ಇದ್ದ ಬಸ್‌ಗಳು ಪ್ರಯಾಣಕ್ಕೆ ತಡೆಯೊಡ್ಡಿದ ಕ್ರಮದಿಂದ ಪರದಾಡುವಂತಾಗಿತ್ತು. ರಸ್ತೆಯಿಂದ 2 ರಿಂದ 3 ಕಿ.ಮೀ ದೂರದವರೆಗೂ ನಡೆದುಕೊಂಡು ಹೋಗಬೇಕಾದ ಮಕ್ಕಳು ದುಃಖಕ್ಕೆ ಕಾರಣವಾಯಿತು. ಪರಿಸ್ಥಿತಿಯನ್ನು ನಿಭಾಯಿಸಲು ಮಾರ್ಗ ಕಾಣದಾದ ಅಧಿಕಾರಿಗಳು ಮತ್ತು ಪೊಲೀಸರು ಹರಸಹಾಸ ಪಡಬೇಕಾಯಿತ್ತು. ಮಕ್ಕಳ ಮುಖ ನೋಡಿ ರಾತ್ರಿ 8 ರಿಂದ ಇದ್ದ ಬಸ್‌ಗಳನ್ನು ಬಿಡಲು ಪ್ರತಿಭಟನೆ ನಿರತ ಪ್ರಯಾಣಿಕರ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಬಿಟ್ಟರೆ ಎಲ್ಲರೂ ತಮ್ಮ ಅಸಾಹಾಯಕತೆ ತೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.