ADVERTISEMENT

ಜವಳಿ ಖಾತೆ ಖುಷಿ ತಂದಿಲ್ಲ: ವರ್ತೂರ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 8:20 IST
Last Updated 13 ಸೆಪ್ಟೆಂಬರ್ 2011, 8:20 IST

ಗಜೇಂದ್ರಗಡ: ಮುಖ್ಯಮಂತ್ರಿ ಸದಾ ನಂದಗೌಡರ ಸಂಪುಟದಲ್ಲಿ ತಮಗೆ ನೀಡಿ ರುವ ಜವಳಿ ಖಾತೆ ಖುಷಿ ತಂದಿಲ್ಲ. ಜವಳಿ ಸಚಿವನಾಗಿ ಕುರುಬ ಸಮಾಜದ ಅಭಿ ವೃದ್ಧಿಗೆ ಕೆಲಸ ಮಾಡಲು ಸಾಧ್ಯ ವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಉತ್ತಮ ಖಾತೆ ಕೊಡುವಂತೆ ಬಿಜೆಪಿ ಮುಖಂಡರಿಗೆ ತಿಳಿಸ್ದ್ದಿದಾಗಿ ಸಚಿವ ವರ್ತೂರ ಪ್ರಕಾಶ ತಿಳಿಸಿದರು.

ಭಾನುವಾರ ಇಲ್ಲಿನ ಸೇವಾ ಲಾಲ ಸಮುದಾಯ ಭವನದಲ್ಲಿ ಸ್ಥಳೀಯ ವರ್ತೂರ ಪ್ರಕಾಶ ಯುವಸೇನೆ ಮತ್ತು ಹಾಲುಮತ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತ ನಾಡಿದರು.ರಾಜ್ಯದಲ್ಲಿ ಅತ್ಯಂತ ದೊಡ್ಡ ಸಂಘಟನಾ ಶಕ್ತಿ ಹೊಂದಿರುವ ಕುರುಬ ಸಮಾಜಕ್ಕೆ ಸಂಪತ್ತು, ಶಿಕ್ಷಣ ಮತ್ತು ಅಧಿಕಾರದ ಸಮಸ್ಯೆ ಇದೆ. ಇದರಿಂದ 15 ರಿಂದ 20 ಶಾಸಕರು ಇರಬೇಕಾದ ವಿಧಾನಸೌಧದಲ್ಲಿ 5ಜನ ಮಾತ್ರ ಇದ್ದೇವೆ.

ಮುಂಬರುವ ಚುನಾವಣೆ ಯಲ್ಲಿ ಹೀಗಾಗದಂತೆ ಕುರುಬ ಸಮಾಜ ದವರು ನೊಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕಳಕಪ್ಪ ಬಂಡಿ, ರಾಜ್ಯದಲ್ಲಿ ನೇಕಾರರ ಬದುಕು ದುಸ್ತರವಾಗಿದೆ. ಬೃಹತ್ ಕೈಗಾರಿಕೆಗ ಳಿಂದಾಗಿ ಇಲ್ಲಿನ ಸಾವಿರಾರು ಕೈಮಗ್ಗ ನೇಕಾರರು ಬೀದಿಗೆ ಬಂದಿದ್ದಾರೆ.  ಸಚಿವರು ಕೈಮಗ್ಗ ನೇಕಾರರ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದರು.
 

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ವೀರಸಂಗೋಳ್ಳಿ ರಾಯಣ್ಣ ಸೊಸೈಟಿಯ ಅಧ್ಯಕ್ಷ ಎಚ್.ಎಸ್. ಸೋಂಪೂರ ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುರುಬ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಆರ್ಥಿ ಕವಾಗಿ ಮುಂದೆ ಬರಬೇಕು ಎಂದರು.

ಹೊಳೆಆಲೂರ ಎ.ಪಿ.ಎಂ.ಸಿ. ಉಪಾ ಧ್ಯಕ್ಷ ಪರಶುರಾಮ ಹಂಡಿ, ಶರಣಪ್ಪ ಡಾ.ಎಚ್. ಎನ್.ನಾಯ್ಕರ, ಲಾಲಪ್ಪ ರಾಠೋಡ, ವರ್ತೂರ ಪ್ರಕಾಶ ಯುವ ಸೇನೆಯ ರಾಜ್ಯ ಸಂಘಟನಾ ಕಾರ್ಯ ದರ್ಶಿ ಮುತ್ತಣ್ಣ ಕೊಪ್ಪಳ, ರೋಣ ತಾಲ್ಲೂಕು ಅಧ್ಯಕ್ಷ ಶರಣಪ್ಪ ಕಂಬಳಿ, ಬಿ.ಕೆ. ವದೇಗೋಳ, ಕಳಕಪ್ಪ ಡೊಳ್ಳಿನ, ಈರಪ್ಪ ಎಲಿಗಾರ, ಪಿ.ಎಚ್.ಮ್ಯಾಗೇರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT