ADVERTISEMENT

ದರ ಏರಿಳಿತ; ಲಾಭವೂ ಉಂಟು, ನಷ್ಟವೂ ಉಂಟು!

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 9:31 IST
Last Updated 17 ಜೂನ್ 2017, 9:31 IST
ಬಳ್ಳಾರಿಯ ಹಳೇ ಬಸ್‌ ನಿಲ್ದಾಣ ಸಮೀಪದಲ್ಲಿರುವ ಪೆಟ್ರೋಲ್‌ ಬಂಕ್‌ ದೃಶ್ಯ
ಬಳ್ಳಾರಿಯ ಹಳೇ ಬಸ್‌ ನಿಲ್ದಾಣ ಸಮೀಪದಲ್ಲಿರುವ ಪೆಟ್ರೋಲ್‌ ಬಂಕ್‌ ದೃಶ್ಯ   

ಬಳ್ಳಾರಿ: ಇಂಧನ ದರವನ್ನು ಪ್ರತಿ ದಿನವೂ ಬದಲಿಸುವ ನಿರ್ಧಾರಕ್ಕೆ ನಗರದಲ್ಲಿ ‘ಲಾಭ– ನಷ್ಟ ಎರಡೂ ಇದೆ’ ಎಂಬ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರೆ ಬಹುತೇಕರು ದರ ಪರಿಷ್ಕರಣೆಯನ್ನು ಸ್ವಾಗತಿಸಿಲ್ಲ.

ದರದ ಬದಲಾವಣೆಯಿಂದ ತೊಂದ ರೆಯೇ ಹೆಚ್ಚು ಎಂದು ಡೀಲರುಗಳು ಮತ್ತು ಬಂಕ್‌ ಸಿಬ್ಬಂದಿ ಹೇಳುತ್ತಾರೆ. ನಿರಂತರವಾಗಿ ದರ ಬದಲಾವಣೆಯಾಗು ವುದುರಿಂದ ಗ್ರಾಹಕರಿಗೆ ಉಳಿತಾಯ ಸಾಧ್ಯತೆ ಹೆಚ್ಚು ಎಂದೂ ಕೆಲವು ಗ್ರಾಹಕರು ಹೇಳಿದರೆ, ಪರಿಷ್ಕರಣೆಯಿಂದ ಯಾವ ಪ್ರಯೋಜನವೂ ಇಲ್ಲ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.
ನಗರದ ವಿವಿಧ ಪೆಟ್ರೋಲ್‌ ಬಂಕ್‌ ಗಳಿಗೆ ‘ಪ್ರಜಾವಾಣಿ’ ಭೇಟಿ ನೀಡಿದ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ಗ್ರಾಹ ಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸೆಟ್‌ ಮಾಡೋದೇ ಕಷ್ಟ: ಪ್ರತಿದಿನ ದರ ಪರಿಷ್ಕರಣೆ ಮಾಡುವುದರಿಂದ ನಮಗೆ ತೊಂದರೆಯೇ ಹೆಚ್ಚು ಎಂದು ಮಾರುತಿ ಬಂಕ್‌ ಮಾಲೀಕರಾದ ಕೃಷ್ಣ ಹೇಳಿದರು.
‘ಪ್ರತಿ ದಿನವೂ ದರವನ್ನು ದಾಖಲಿ ಸಿಯೇ ವಹಿವಾಟವನ್ನು ಆರಂಭಿಸಬೇಕು. ಕೊಂಚ ಏರುಪೇರಾದರೂ ನಷ್ಟ ಕಟ್ಟಿಟ್ಟ ಬುತ್ತಿ.

ADVERTISEMENT

ಖರೀದಿಸಿದ ಡಿಸೇಲ್ ಮತ್ತು ಪೆಟ್ರೋಲ್ ಹಾಸನ ಮತ್ತು ಮಂಗಳೂರಿನಿಂದ ಬರುವುದಕ್ಕೆ ಒಂದು ದಿನ ಬೇಕಾಗುತ್ತದೆ. ಖರೀದಿಸಿದ ದರ ಹೆಚ್ಚಿದ್ದು, ಮಾರನೇ ದಿನ ದರ ಕಡಿಮೆ ಯಾದರೆ ನಷ್ಟವಾಗುತ್ತದೆ. ಆದರೆ ಖರೀದಿ ದರ ಕಡಿಮೆ ಇದ್ದು, ಮಾರನೇ ದರ ಹೆಚ್ಚಾದರೆ ಲಾಭ ದೊರಕಬಹುದು. ಆದರೆ ಇದು ಹೀಗೇ ಎಂದು ಹೇಳಲು ಆಗುವುದಿಲ್ಲ. ಈ ಅನಿಶ್ಚಿತತೆ ನಡುವೆಯೇ ವಹಿವಾಟು ನಡೆಸುವ ಅನಿವಾರ್ಯ ಈಗಿನದು’ ಎಂದು ವಿಶ್ಲೇಷಿಸಿದರು.

ಹಿಂದಿನದೇ ಉತ್ತಮ: ದರ ಪರಿಷ್ಕರಣೆ ಕುರಿತು ಗ್ರಾಹಕರು ‘ಬಂಕ್‌ನ ಜಾಣ ತನ’ದ ಕುರಿತು ಅಸಮಾಧಾನ ವ್ಯಕ್ತಪಡಿ ಸುತ್ತಾರೆ. ದರ ಹೆಚ್ಚಾದಾಗ ಬಂಕ್‌ನಲ್ಲಿ ಇಂಧನಕ್ಕೆ ಕೊರತೆಯೇ ಇರುವುದಿಲ್ಲ. ಆದರೆ ದರ ಕಡಿಮೆಯಾದರೆ ನೋ ಸ್ಟಾಕ್‌ ಎಂಬ ಫಲಕವನ್ನು ತೋರಿಸುತ್ತಾರೆ.

ಲಾಭಾಂಶ ಪಡೆಯಲು ಗ್ರಾಹಕರಿಗೆ ಅವಕಾಶವನ್ನೇ ಕೊಡುವುದಿಲ್ಲ. ಹೀಗಾಗಿ ಯಾವಾಗ ದರ ಪರಿಷ್ಕರಣೆ ಆದರೂ ಗ್ರಾಹಕರಿಗೆ ಪ್ರಯೋಜನ ವಾಗುವುದಿಲ್ಲ ಎಂದು ತಾಲೂಕಿನ ಜಾಲಿಬೆಂಚಿ ಗ್ರಾಮದ ಹನುಮಂತ ರೆಡ್ಡಿ ಹೇಳಿದರು.  ನಗರದ ನಿವಾಸಿ ನಟರಾಜ್‌ ಅವರೂ ಇದೇ ಅಭಿಪ್ರಾಯ ವನ್ನು ವ್ಯಕ್ತಪಡಿ ಸಿದರು. ದರ ಪರಿಷ್ಕರಣೆ ಲಾಭ ತರು ವಂತೆ ಇಲ್ಲದಿದ್ದರೆ ಬಂಕ್‌ಗಳು ಮುಚ್ಚುವ ಪರಿಸ್ಥಿತಿ ಬರಬಹುದು. ಆಗ ಗ್ರಾಹಕರು ಇಂಧನ ದೊರಕದೆ ಪರ ದಾಡಬೇಕಾ ಗುತ್ತದೆ. ಇಂಥ ಸನ್ನಿವೇಶ ನಿಯಂತ್ರಿಸುವ ವರು ಯಾರು ಎಂದು ಪ್ರಶ್ನಿಸಿದರು.

ಪ್ರಯೋಜನಕಾರಿ: ಪ್ರತಿದಿನ ದರ ಪರಿಷ್ಕರಣೆಯಿಂದ ಗ್ರಾಹಕರಿಗೆ ಪ್ರಯೋ ಜವಾಗಲಿದೆ.ನಿರ್ದಿಷ್ಟ ಮಾನದಂಡಗಳೇ ಇಲ್ಲದೆ ಯಾವಾಗಲೋ ಒಮ್ಮೆ ದರ ಪರಿಷ್ಕರಣೆ ನಡೆದರೆ ತೈಲ ಕಂಪೆನಿಗಳಿಗೆ ಮಾತ್ರ ಲಾಭವಾಗುತ್ತದೆ. ಆದರೆ ಈಗ ದಿನವೂ ಪರಿಷ್ಕರಣೆ ಆಗುವುದರಿಂದ ಗ್ರಾಹಕರಿಗೂ ಲಾಭ ದೊರಕುತ್ತದೆ ಎಂದು  ನಗರದ ನಿವೃತ್ತ ಸರ್ಕಾರಿ ನೌಕರ ವೀರಭಧ್ರಪ್ಪ ಅಭಿಪ್ರಾಯಪಟ್ಟರು.

* * 

ಪ್ರತಿ ದಿನವೂ ಆಗುವ ದರ ಪರಿಷ್ಕರಣೆಯನ್ನು ಅಂದಂದೇ ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ. ಈ ಪದ್ಧತಿಯಿಂದ ನಷ್ಟವೇ ಹೆಚ್ಚಾಗುತ್ತದೆ
ಕೃಷ್ಣ, ಮಾರುತಿ ಬಂಕ್‌ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.