ADVERTISEMENT

ನೀರು ಪೂರೈಕೆ ನಿರ್ವಹಣೆ: ಕಂಪ್ಯೂಟರ್ ಬಳಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 5:45 IST
Last Updated 19 ಏಪ್ರಿಲ್ 2012, 5:45 IST

ಬಳ್ಳಾರಿ: ರಾಜ್ಯವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದು, ಕಂಪ್ಯೂಟರ್ ಬಳಕೆ ಮೂಲಕ ಕುಡಿ ಯುವ ನೀರು ಪೂರೈಕೆ ಹಾಗೂ ನಿರ್ವಹಣೆ ಕುರಿತ ಮಾಹಿತಿ ಸಂಗ್ರಹಿಸ ಬೇಕಿದೆ ಎಂದು ಜಿ.ಪಂ. ಉಪ ಕಾರ್ಯದರ್ಶಿ ಮಹೇಶ್ವರಯ್ಯ ತಿಳಿಸಿದರು.

ಜಿ.ಪಂ. ಸಭಾಂಗಣದಲ್ಲಿ ಬುಧವಾರ ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸುವ ಕುರಿತು ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಜಿ.ಪಂ. ಎಂಜಿನಿಯರಿಂಗ್ ವಿಭಾಗಗಳ ಸಿಬ್ಬಂದಿಗಾಗಿ ಎರ್ಪಡಿಸಿದ್ದ ಸಮಗ್ರ ಮಾಹಿತಿ ನಿರ್ವಹಣೆ ವ್ಯವಸ್ಥೆ (ಐಎಂಐಎಸ್) ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ಭಾಗವಾದ ಬಳ್ಳಾರಿ ಜಿಲ್ಲೆಯಲ್ಲಿ ತಂತ್ರಜ್ಞಾನದ ಬಳಕೆಯ ಮೂಲಕ ನೀರು ಪೂರೈಕೆ ನಿರ್ವಹಣೆ ಸಮರ್ಪಕವಾಗಿ ಕೈಗೊಳ್ಳಬೇಕಿದೆ. ಎಲ್ಲ ಎಂಜಿಜಿನಿಯರ್‌ಗಳೂ ಉತ್ತಮ ತರಬೇತಿ ಪಡೆದು ಕಂಪ್ಯೂಟರ್ ಬಳಕೆ ಮಾಡಿದರೆ ಲಭ್ಯ ಸಂಪನ್ಮೂಲದಲ್ಲೇ ಸಮರ್ಪಕವಾಗಿ ನೀರು ಸರಬರಾಜು ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಎಂಜಿನಿಯರ್‌ಗಳು ಮುಂದಾಗಬೇಕು  ಎಂದು ಅವರು ತಿಳಿಸಿದರು.

ಅಧೀಕ್ಷಕ ಎಂಜಿನಿಯರ್ ಎಜಾಜ್ ಹುಸೇನ್ ಅವರು ತರಬೇತಿಯ ಅಗತ್ಯದ ಕುರಿತು ವಿವರಿಸಿ, ಎಲ್ಲ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ, ಕುಡಿಯುವ ನೀರಿನ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಡಿ.ಬಸವನಗೌಡ, ಮುರುಳೀ ಧರ, ಡಿ. ಮಂಜುನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.