ಬಳ್ಳಾರಿ: ಇಲ್ಲಿನ ಗೌತಮ ನಗರ (ಡಿಸಿ ನಗರ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ `ತೆಗೆಯಿರಿ ಪುಸ್ತಕ ಹೊರಗೆ ಹಚ್ಚಿರಿ ಜ್ಞಾನದ ದೀವಿಗೆ~ ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಎಲ್ಲ ಪುಸ್ತಕಗಳನ್ನು ಹೊರ ತೆಗೆದು ವಿದ್ಯಾರ್ಥಿಗಳಿಗೆ ಓದಲು ನೀಡಿದ ಶಿಕ್ಷಕರು, ತಾವು ಕೂಡ ವಿದ್ಯಾರ್ಥಿಗಳ ಜೊತೆ ಪುಸ್ತಕಗಳ ಅಧ್ಯಯನ ನಡೆಸಿ ದರು. ಇದಕ್ಕೂ ಮೊದಲು ಎಲ್ಲ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಎಲ್ಲ ವಿದ್ಯಾರ್ಥಿಗಳನ್ನು ಕರೆದು ತಮಗೆ ಇಷ್ಟವಾದ ಪುಸ್ತಕ ವನ್ನು ಆಯ್ದುಕೊಂಡು ಓದುವಂತೆ ಸೂಚಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಎಸ್. ಮೆಹಬೂಬ್ ಬಾಷಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಕ್ಕಳೊಂದಿಗೆ ತಾವು ಪುಸ್ತಕ ಅಧ್ಯಯನದಲ್ಲಿ ನಿರತರಾದರು. ಪ್ರಭಾರ ಮುಖ್ಯ ಗುರು ಕೆ.ಆಂಜನೇಯ, ಡಿ.ಕೆ. ತಾತಪ್ಪ, ಆರ್. ಶಕುಂತಲಾ, ಸಿ.ಗೀತಾಬಾಯಿ, ರಫಿಯಾ, ಆರೋಗ್ಯ ಮೇರಿ, ಪ್ರೇಮಲತಾ ಉಪಸ್ಥಿತರಿದ್ದರು.
ಮರಿಯಮ್ಮನಹಳ್ಳಿ ವರದಿ
ಪುಸ್ತಕಗಳು ಮನುಷ್ಯನ ಒಳ್ಳೆಯ ಸ್ನೇತರಂತೆ, ಇವುಗಳಿಂದ ಜ್ಞಾನ ಭಂಡಾರವನ್ನು ಹೆಚ್ಚುತ್ತಿದ್ದು. ಜತೆಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವು ದರಿಂದ ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿ ಯಾಗಿವೆ ಎಂದು ಕನ್ನಡ ಪಂಡಿತ ಹಾಗೂ ಗಾಂಧಿವಾದಿ ಕೆ. ನಾರಾಯಣ ಭಟ್ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಡಣಾಪುರ- 114 ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರದ್ಧಾ ಗ್ರಂಥಾಲಯ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತಿ ಪರಮೇಶ್ವರ ಸೊಪ್ಪಿನಮಠ ಮಾತನಾಡಿ ಪುಸ್ತಕಗಳನ್ನು ಇದು ಚಿಕ್ಕ ವಯಸ್ಸಿನಲ್ಲಿಯೇ ಆರಂಭವಾಗಬೇಕು ಎಂದರು.
ಹಿರಿಯ ಚಿತ್ರಕಲಾವಿದ ಎಚ್. ಶ್ರೀನಿವಾಸರಾವ್, ಶಿಕ್ಷಣ ಪ್ರೇಮಿ ಉದಯಕುಮಾರ್, ಪ್ರೌಢಶಾಲೆಯ ಮುಖ್ಯಶಿಕ್ಷಕ ಸುರೇಶ ಗೌಡ ಮಾತನಾಡಿದರು. ಮುಖ್ಯ ಗುರು ಬಿ.ಎಂ.ಎಸ್. ಮತ್ಯುಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಎಲ್. ಕೊಟ್ರೇಶ ಅಧ್ಯಕ್ಷತೆವಹಿಸಿದ್ದರು. ಸದಸ್ಯೆ ಪ್ರೇಮಾಬಾಯಿ, ಶಿಕ್ಷಕರಾದ ಫಣಿರಾಜ್, ಸರಸ್ವತಿ, ಮಹಾಸತಿ ಇತರರು ಉಪಸ್ಥಿತರಿದ್ದರು. ಕೊಟ್ರಪ್ಪ ಕಾರ್ಯಕ್ರಮ ನಿರ್ವಹಿಸಿದರು. ಜಯಪ್ಪ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.