ADVERTISEMENT

‘ಬಡವರನ್ನು ಮರೆತ ಕಾಂಗ್ರೆಸ್‌’

ಬಿಜೆಪಿ ಮಂಡಲ–ಬೂತ್‌ ಅಧ್ಯಕ್ಷರ ಸಭೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 6:26 IST
Last Updated 13 ಮಾರ್ಚ್ 2018, 6:26 IST
ಸಿರುಗುಪ್ಪದಲ್ಲಿ ಸೋಮವಾರ ನಡೆದ ಬಿಜೆಪಿ ಪಕ್ಷದ ಮಂಡಲ ಪದಾಧಿಕಾರಿಗಳ ಮತ್ತು ಬೂತ್‌ ಅಧ್ಯಕ್ಷರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗಿ ಮಾತನಾಡಿದರು.
ಸಿರುಗುಪ್ಪದಲ್ಲಿ ಸೋಮವಾರ ನಡೆದ ಬಿಜೆಪಿ ಪಕ್ಷದ ಮಂಡಲ ಪದಾಧಿಕಾರಿಗಳ ಮತ್ತು ಬೂತ್‌ ಅಧ್ಯಕ್ಷರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗಿ ಮಾತನಾಡಿದರು.   

ಸಿರುಗುಪ್ಪ: ‘ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರವು ಗರೀಬಿ ಹಠಾವೋ ಎಂದು ಘೋಷಣೆ ಹೊರಡಿಸಿ ಬಡವರ ಮತಗಳನ್ನು ಪಡೆಯಿತು. ಆದರೆ ನಂತರ ಬಡವರನ್ನು ಪೂರ್ಣ ಮರೆಯಿತು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗಿ ದೂರಿದರು.

ನಗರದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಪಕ್ಷದ ಮಂಡಲ ಪದಾಧಿಕಾರಿಗಳು ಹಾಗೂ ಬೂತ್ ಅಧ್ಯಕ್ಷರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರಮೋದಿಯವರು ಬಡಜನರ ಏಳ್ಗೆಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ’ ಎಂದರು.

ಕೊಪ್ಪಳ ಸಂಸದ ಕರಡಿ ಸಂಗಣ್ಣ ಮಾತನಾಡಿದರು. ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಶಂಕರಪ್ಪ, ಕಾರ್ಯಕಾರಿಣಿ ಸದಸ್ಯ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿದರು.

ADVERTISEMENT

ಮುಖಂಡ ಶಿವರಾಮೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ನಾಗರಾಜಗೌಡ, ಜಿಲ್ಲಾ ಸಂಚಾಲಕ ಅನಿಲ್‌ನಾಯ್ಡು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೋಟೇಶ್ವರರೆಡ್ಡಿ, ರತ್ನಮ್ಮ, ಬಿ.ಜಿ.ರವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ, ಮುಖಂಡರಾದ ಕೆ.ಶಂಕರರೆಡ್ಡಿ, ದಮ್ಮೂರು ಸೋಮಪ್ಪ, ಎಚ್‌.ಎಂ.ಗುರುಸಿದ್ದಯ್ಯಸ್ವಾಮಿ, ಎಂ.ಆರ್‌.ಬಸವನಗೌಡ, ಶಫೀ, ಕಂಬಳಿ ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.