ADVERTISEMENT

`ಬಿಜೆಪಿಯಿಂದ ಉತ್ತಮ ಆಡಳಿತ'

ಅಭಿವೃದ್ಧಿಯೇ ಮೂಲಮಂತ್ರ: ಶಾಸಕ ನೇಮಿರಾಜ್ ನಾಯ್ಕ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 6:06 IST
Last Updated 26 ಏಪ್ರಿಲ್ 2013, 6:06 IST

ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ 50 ವರ್ಷ ಹಾಗೂ ಜೆಡಿಎಸ್ 12 ವರ್ಷಗಳ ಆಡಳಿತ ನಡೆಸಿದೆ. ಆದರೆ, ಕಳೆದ 5 ವರ್ಷಗಳಲ್ಲಿ ಸಮ ರ್ಪಕ ಅನುದಾನ ಒದಗಿಸಿ ಜನಪರ ಅಭಿ ವೃದ್ಧಿ ಕಾಮಗಾರಿಗಳನ್ನು ಜಾರಿಗೊಳಿಸಿ ಉತ್ತಮ ಆಡಳಿತ ನೀಡಿದ ಹೆಗ್ಗಳಿಕೆ ಬಿಜೆಪಿ ಸರಕಾರದ್ದಾಗಿದೆ ಎಂದು ಹಾಲಿ ಶಾಸಕ ನೇಮಿರಾಜ್‌ನಾಯ್ಕ ತಿಳಿಸಿದರು.

ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಯಾಗಿ ಮರು ಆಯ್ಕೆ ಬಯಸಿರುವ ಅವರು, ತಾಲ್ಲೂಕಿನ ಉಲವತ್ತಿ ಗ್ರಾಮದಲ್ಲಿ ಗುರುವಾರ ತಮ್ಮ ಬೆಂಬಲಿಗರೊಂದಿಗೆ ವ್ಯಾಪಕ ಪ್ರಚಾರ ನಡೆಸಿ ನಂತರ ಮತದಾರರೊಂದಿಗೆ ಸಂವಾದ ನಡೆಸಿದರು.

ಚುನಾವಣೆ ಎದುರಿಸಲು ಅಭಿವೃದ್ಧಿ ಯನ್ನೇ ಮೂಲಮಂತ್ರವಾಗಿ ಹಿಡಿ ದಿರುವ ನನಗೆ ಜನರ ಆಶೀರ್ವಾದದ ಅಗತ್ಯವಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತ ನೋಡಿರುವ ನೀವು ಬಿಜೆಪಿ ಶಾಸಕನಾಗಿ ನಾನು ಆಯ್ಕೆಯಾದ ನಂತರ ನಡೆಸಿರುವ ಸಾಧನೆಯನ್ನು ಅವಲೋಕಿಸಿರಿ. ದಲಿತ ಹಾಗೂ ಹಿಂದುಳಿದ ವರ್ಗಗಳ ಸಹಿತ ಎಲ್ಲ ಸಮುದಾಯದ ಹಿತದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿ ಕ್ಷೇತ್ರ ಅಭಿವೃದ್ಧಿಗೆ ಪಣ ತೊಟ್ಟಿದೆ ಎಂದು ಪ್ರತಿಪಾದಿಸಿದರು.

ಕ್ಷೇತ್ರದ ಗಡಿಯಂಚಿನ ಕನ್ನನಾಯಕನಕಟ್ಟೆ, ಕಿತ್ನೂರು ಅಂತಹ ಗ್ರಾಮಗಳಲ್ಲಿ ಸುಸಜ್ಜಿತ ಸಿಸಿ ರಸ್ತೆ ಮತ್ತು ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರ ಯಾವ ಗ್ರಾಮಕ್ಕೂ ಅನುದಾನ ಒದಗಿಸಿಲ್ಲ ಎನ್ನುವ ಮಾತೇ ಇಲ್ಲ. ಕ್ಷೇತ್ರ ವ್ಯಾಪ್ತಿ ಯಲ್ಲಿ ನಾನು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು, ಕಳೆದ ಆರು ದಶಕಗಳಿಂದ ಪ್ರತಿನಿಧಿಸಿದ್ದ ಜನಪ್ರತಿನಿಧಿ ಗಳಿಂದ ಕಡೆಗಣಿಸಲ್ಪಟ್ಟಿದ್ದವು ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ. ವೆಂಕಟೇಶ್ ತಮ್ಮ ಅನೇಕ ಬೆಂಬಲಿಗ ರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ತಾಲ್ಲೂಕಿನ ಎಂ.ಬಿ . ಕಾಲೊನಿ ಗ್ರಾಮದ ನಾನಾ ಪಕ್ಷಗಳಿಗೆ ಸೇರಿರುವ ನೂರಾರು ಯುವ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು.

ಜಿಲ್ಲಾ ಖಾದಿ ಮತ್ತು ಗ್ರಾಮೋ ದ್ಯೋಗ ಮಂಡಳಿ ಅಧ್ಯಕ್ಷ ನರೇಗಲ್ ಕೊಟ್ರೇಶ್, ಜಿ.ಪಂ.ಮಾಜಿ ಸದಸ್ಯ ಚನ್ನಬಸವರಾಜು, ಮುಖಂಡರಾದ ಮಾತಾಗ್ಯಾಸ್ ಎರಿಸ್ವಾಮಿ, ಡಿಶ್ ಮಂಜುನಾಥ್, ಡಿ.ಶರಣಪ್ಪ, ಎಂ.ಎ. ರಾಮಣ್ಣ ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಮತ ಯಾಚನೆಯ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT