ADVERTISEMENT

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 6:57 IST
Last Updated 17 ಡಿಸೆಂಬರ್ 2013, 6:57 IST

ಸಂಡೂರು: ಗಣಿ ಬಾಧಿತ ಗ್ರಾಮವಾದ ಸಂಡೂರು ತಾಲ್ಲೂಕಿನ ಕಮ್ಮತ್ತೂರು ಗ್ರಾಮಸ್ಥರ ವಿವಿಧ ಬೇಡಿಕೆಗಳನ್ನು ಈಡೇರಿಸಲು  ಒತ್ತಾಯಿಸಿ ಗ್ರಾಮಸ್ಥರು ಪರಿಸರ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸೋಮವಾರದಂದು ಶ್ರೀಕುಮಾರ­ಸ್ವಾಮಿ ದೇವಸ್ಥಾನದಿಂದ ಸಂಡೂರಿನ ತಾಲ್ಲೂಕು ಕಚೇರಿಯ­ವರೆಗೆ ಪಾದಯಾತ್ರೆ ನಡೆಸಿ, ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ, ಗ್ರಾಮೀಣಾಭಿವೃದ್ಧಿ ಸಚಿವರಿಗೆ ತಮ್ಮ ಮನವಿ ಪತ್ರವನ್ನು ಸಲ್ಲಿಸಿದರು.

ತಾಲ್ಲೂಕು ಕಚೇರಿಯ ಪ್ರಭಾರಿ ಶಿರಸ್ತೆದಾರ್ ರವೀಂದ್ರಬಾಬು ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಪರಿಸರ ಸಂರಕ್ಷಣಾ ಸಮಿತಿಯ ಮುಖಂಡ ಸಿದ್ದಪ್ಪ, ಪೆನ್ನಪ್ಪ ಮುಂತಾದವರು ಮಾತನಾಡಿ, ಕಮತೂರು ಗ್ರಾಮದ ಸುತ್ತಲೂ ನಡೆದ ಗಣಿಗಾರಿಕೆಯಿಂದ ಗ್ರಾಮವು ತತ್ತರಿಸಿ ಹೋಗಿದ್ದು, ಇಲ್ಲಿ ಗಣಿಗಾರಿಕೆ ನಡೆಸಿದ ಕಂಪನಿಗಳು ಗ್ರಾಮಸ್ಥರಿಗೆ ಮೂಲ ಸೌಕರ್ಯ ಒದಗಿಸಲಿಲ್ಲ, ಗ್ರಾಮದ ರಸ್ತೆಯಲ್ಲಿ ಗಣಿ ಲಾರಿಗಳ ಓಡಾಟದಿಂದ ದೂಳು ಬರದಂತೆ ರಸ್ತೆಗೆ ನೀರನ್ನು ಹೊಡೆಸಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕು ಮುಂತಾದ ಗ್ರಾಮಸ್ಥರ ಬೇಡಿಕೆ­ಗಳನ್ನು ಈಡೇರಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಿ.ಎನ್.ಸಿಂಹ, ಶ್ರೀಶೈಲ, ತಾಜುದ್ದೀನ್, ಪಾರ್ವತಿ ಕರೂರ್, ಈರಣ್ಣ ಮೂಲೆಮನೆ, ಮುದುಕಪ್ಪ, ಶಕಿಲಾ ಬಾನು, ರತ್ನಮ್ಮ, ಶಿವಗಂಗಮ್ಮ, ಪುಷ್ಪಲತ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.