ADVERTISEMENT

ಮರಳು ಅಕ್ರಮ ಸಾಗಾಟ: ಗ್ರಾಮಸ್ಥರಿಂದ ತಡೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 5:55 IST
Last Updated 16 ಅಕ್ಟೋಬರ್ 2012, 5:55 IST
ಮರಳು ಅಕ್ರಮ ಸಾಗಾಟ: ಗ್ರಾಮಸ್ಥರಿಂದ ತಡೆ
ಮರಳು ಅಕ್ರಮ ಸಾಗಾಟ: ಗ್ರಾಮಸ್ಥರಿಂದ ತಡೆ   

ಸಿರುಗುಪ್ಪ: ಹಗರಿ ನದಿಯಿಂದ ಮರಳು ಸಾಗಾಣಿಕೆ ಮಾಡುತ್ತಿದ್ದ  ಲಾರಿ ಮತ್ತು ಇಟಾಚಿ ಯಂತ್ರವನ್ನು ಗ್ರಾಮಸ್ಥರೇ ತಡೆದು ನಿಲ್ಲಿಸಿದ ಘಟನೆ ಸೋಮವಾರ ನಡೆದಿದೆ.

ತಾಲ್ಲೂಕಿನ ಗಜಿಗಿನಹಾಳು ಗ್ರಾಮದ ಬಳಿ ಹಗರಿ ನದಿಯಲ್ಲಿರುವ ಮರಳನ್ನು 15 ದಿನಗಳಿಂದ  ಹಗಲು-ರಾತ್ರಿ  ಸಾಗಿಸಲಾಗುತ್ತಿದೆ. ದೊಡ್ಡ ಗಾತ್ರದ ಆಂಧ್ರಪ್ರದೇಶ ಮೂಲದ ಹತ್ತು ಲಾರಿಗಳಲ್ಲಿ ಮರಳು ಸಾಗಿಸುತ್ತಿದ್ದರು ಎನ್ನಲಾಗಿದೆ.

ನದಿಯಲ್ಲಿ ಹೇರಳವಾಗಿ ಸಂಗ್ರಹವಾಗಿರುವ ಗುಣಮಟ್ಟದ ಮರಳನ್ನು ಇಟಾಚಿ ಯಂತ್ರವನ್ನು ಬಳಸಿಕೊಂಡು ಸಾಗಾಣಿಕೆ ಮಾಡುವ ದಂಧೆ ಎಗ್ಗಿಲ್ಲದೆ ಸಾಗಿರುವುದನ್ನು ಕಂಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಸೋಮವಾರ ವಾಹನಗಳನ್ನು ತಡೆದು ಈ ದಂಧೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಭಾರಿ ವಾಹನಗಳ ಓಡಾಟದಿಂದ ರಸ್ತೆ ಹಾಳಾಗಿ ಹೋಗಿದೆ. ರಸ್ತೆ ಬದಿಯ ಮನೆಯ ಗೋಡೆಗಳಿಗೆ ಹಾನಿಯಾಗಿದೆ.

ಅಪಾರ ಪ್ರಮಾಣದ ಮರಳನ್ನು ತೆಗೆದಿರುವುದರಿಂದ ನದಿಯಲ್ಲಿ ಅಂರ್ತಜಲಮಟ್ಟ ಕುಸಿಯುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಗಳನ್ನು ಗ್ರಾಮಸ್ಥರು ತಡೆದಿರುವ ಸುದ್ದಿ ತಿಳಿಸಿದ ತಕ್ಷಣ ಎಸ್‌ಐ ಯಶವಂತ್ ಬಿಸನಹಳ್ಳಿ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.