ADVERTISEMENT

ಮಳೆಗಾಗಿ ಕಪ್ಪೆಗಳಿಗೆ ಮದುವೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 5:20 IST
Last Updated 9 ಜುಲೈ 2012, 5:20 IST

ಹೂವಿನಹಡಗಲಿ: ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದ್ದು ಮುನಿದ ಮಳೆರಾಯನ ಒಲುಮೆಗಾಗಿ ಅನೇಕ ಧಾರ್ಮಿಕ ಆಚರಣೆಗಳನ್ನು ಮಾಡುತ್ತಾ ದೈವದ ಮೊರೆ ಹೋಗಿದ್ದಾರೆ.

ತಾಲ್ಲೂಕಿನ ಹೊಳಗುಂದಿ ಗ್ರಾಮ ದಲ್ಲಿ ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿ ಪ್ರಾರ್ಥನೆ ಮಾಡಿ ಮಳೆಗಾಗಿ ಕಾಯುತ್ತಿದ್ದಾರೆ.

ಮಂಡೂಕ ಮದುವೆ ಸಮಾರಂಭ ದಲ್ಲಿ ಹೊಳಗುಂದಿ ಗ್ರಾಮದ ಸಿದ್ದೆೀಶ್ವರ ದೇವಸ್ಥಾನದಲ್ಲಿ ಗ್ರಾಮದ ಜನರು ಸೇರಿ ವಿವಾಹ ಮಹೋತ್ಸವ ಆಚರಿಸಿದರು.

ದೇವಸ್ಥಾನ ಮುಂಭಾಗದಲ್ಲಿ ಹಂದರ ಹಾಕಿ, ರಂಗವಲ್ಲಿ ಬಿಡಿಸಿ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.
ಗಂಡು-ಹೆಣ್ಣು ಕಪ್ಪೆಗಳನ್ನು ತಂದು ಮಳೆರಾಯ ಮತ್ತು ವಟುಗುಟ್ಟಮ್ಮ ಎಂದು ವಧು-ವರರಿಗೆ ಹೆಸರಿಡ ಲಾಯಿತು. ಶಾಸ್ತ್ರೋಕ್ತ ಮದುವೆ ಕಾರ್ಯದಲ್ಲಿ ಮಹಿಳೆಯರು ಪೂರ್ಣ ಕುಂಭ ಕಳಸದೊಂದಿಗೆ ತೆರಳಿ ಪವಿತ್ರ ಗಂಗಾಪೂಜೆ ನೆರವೇರಿಸಿ ಕಪ್ಪೆಗಳ ಮದುವೆ ಮಾಡಲಾಯಿತು.

ಮುಹೂರ್ತಕ್ಕೂ ಮುನ್ನ ಅಗಸೆ ಬಾಗಿಲುವರೆಗೂ ವಾದ್ಯಗಳೊಂದಿಗೆ ಮೆರವಣಿಗೆ ಜರುಗಿತು. ಪರಸ್ಪರರಿಗೆ ಅರಿಷಿಣ ಹಚ್ಚಿ, ಕಪ್ಪೆಗಳಿಗೆ ಸುರಿಗಿ ನೀರೆರೆಯಲಾಯಿತು.

ಹೊಸಬಟ್ಟೆ ಮತ್ತು ಬಾಸಿಂಗ ತೊಡಿಸಿ ಎಚ್.ಎಂ. ಮಲ್ಲಿಕಾರ್ಜು ನಯ್ಯ, ಯು. ಎಂ.ಮಹಾಸ್ವಾಮಿ  ಪೌರೋಹಿತ್ಯದಲ್ಲಿ ಕಪ್ಪೆಗಳಿಗೆ ಮಾಂಗಲ್ಯಧಾರಣೆ ಮಾಡಲಾಯಿತು.

ಅಲಂಕೃತ ಕಪ್ಪೆಗಳನ್ನು ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸ ಲಾಯಿತು. ವಿಘ್ನೇಶ್ವರ ಯುವಕ ಸಂಘದ ಅಧ್ಯಕ್ಷ ಕೊಟ್ರೇಶ, ಕಾರ‌್ಯದರ್ಶಿ ಎಚ್. ಕರಿಬಸಪ್ಪ, ಬಿ.ವೀರಪ್ಪ ಹಾಗೂ ಸಂಘದ ಸದಸ್ಯರು, ಗ್ರಾಮಸ್ಥರು, ಮಹಿಳೆಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.