ADVERTISEMENT

ಮಳೆಯಿಂದ ಬೆಳೆ ಹಾನಿ: ಅಧಿಕಾರಿಗಳಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2012, 5:00 IST
Last Updated 7 ನವೆಂಬರ್ 2012, 5:00 IST

ಕಂಪ್ಲಿ: ನೀಲಂ ಮಳೆಯಿಂದ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಹಾನಿಯಾದ ಬೆಳೆಗಳ ನಷ್ಟದ ಅಂದಾಜು ಪರಿಶೀಲನೆಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಕೈಗೊಂಡಿದೆ.

ತೋಟಗಾರಿಕೆ ಬೆಳೆಗಳಾದ ಮೆಣಸಿನಕಾಯಿ, ಟೋಮೆಟೊ, ಬದನೆಕಾಯಿ, ವಾಣಿಜ್ಯ ಬೆಳೆಗಳಾದ ಬಾಳೆ, ಹತ್ತಿ, ಕೆಲ ಕಡೆ ಬತ್ತ ಬೆಳೆಗಳಿಗೆ ತೀವ್ರ ಹಾನಿಯಾಗಿದ್ದು, ಸಮೀಕ್ಷೆ ನಡೆಸಿ ನಷ್ಟದ ಅಂದಾಜನ್ನು ನಂತರ ಮೇಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಕೆಲ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಕಂದಾಯ ಇಲಾಖೆಯವರು ಸಮೀಕ್ಷೆ ಮುಂದುವರಿಸಿದ್ದಾರೆ. ಬೆಳೆ ಮತ್ತು ಮನೆಗಳ ಹಾನಿ ಬಗ್ಗೆ ಸಮೀಕ್ಷಾ ವರದಿಯ ನಂತರ ವಾಸ್ತಾವ ವರದಿ ತಿಳಿಯಲಿದೆ ಎಂದು ಎರಡು ಇಲಾಖೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಆಗ್ರಹ: ಮಳೆಯಿಂದ ತುಂಬಾ ನಷ್ಟ ಹೊಂದಿದ್ದು, ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಹತ್ತಿ ಬೆಳೆ ಕಳೆದುಕೊಂಡ ಮೆಟ್ರಿ ಗ್ರಾಮದ ಮೇಗಳಮನಿ ಈಶ್ವರ ಮತ್ತು ಜಿ. ದೊಡ್ಡ ಯರ‌್ರಿಸ್ವಾಮಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಕೆಲ ಕಡೆ ಹಳ್ಳಗಳಿಗೆ ಅಡ್ಡಲಾಗಿ ನಿರ್ಮಿಸಿರುವ ವಡ್ಡುಗಟ್ಟೆಗಳಿಗೆ ಹಾನಿಯಾಗಿದ್ದು, ಇದರಿಂದ ಹೊಲಗಳಿಗೆ ನೀರು ದೊರೆಯದಂತಾಗಿದೆ ಎಂದು ವಡ್ಡುಗಟ್ಟೆ ಆಶ್ರಯಿಸಿರುವ ರೈತರು ತಿಳಿಸಿದ್ದಾರೆ. ಆದಷ್ಟು ತೀವ್ರವಾಗಿ ವಡ್ಡುಗಟ್ಟೆಗಳನ್ನೂ ದುರಸ್ತಿ ಮಾಡಿಸುವಂತೆ ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.