ADVERTISEMENT

ಮೇವಿಗೆ ಬದಲಾಗಿ ಆಹಾರ ವಿತರಿಸಿ: ಲಾಡ್

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 5:05 IST
Last Updated 21 ಏಪ್ರಿಲ್ 2012, 5:05 IST

ಕೂಡ್ಲಿಗಿ: ಬರ ಕಾಮಗಾರಿ ಯೋಜನೆ ಯಡಿ ಜಾನುವಾರುಗಳಿಗೆ ವಿತರಿಸುವ ಮೇವಿನ ಬದಲಾಗಿ ಕೆಎಂಎಫ್ ಆಹಾರವನ್ನು ವಿತರಿಸುವಂತೆ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಸರ್ಕಾರವನ್ನು ಒತ್ತಾಯಿಸಿದರು.
ಅವರು ಗುರುವಾರ ತಾಲ್ಲೂಕಿನ ವಿವಿಧ ಗ್ರಾಮಗಳ ಬರ ಪರಿವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಲ್ಲೂಕಿನಲ್ಲಿ ಕೋಟ್ಯಂತರ ರೂಪಾಯಿಗಳಷ್ಟು ಬೆಲೆ ಬಾಳುವ ಮರಳನ್ನು ತೆಗೆದು ಹೊರ ರಾಜ್ಯಗಳಿಗೆ, ಬೆಂಗಳೂರಿಗೆ ಮಾರಾಟ ಮಾಡಲಾಗಿದೆ. ಸಣ್ಣ ಗ್ರಾಮಗಳಲ್ಲಿ 40ರಿಂದ 50 ಲಕ್ಷ ರೂ.ಗಳಷ್ಟು ಕಾಮಗಾರಿಗಳು ನಡೆಯದೇ ಹಣ ಲೂಟಿ ಮಾಡಲಾಗಿದೆ. ಇದು ಸ್ಥಳೀಯರಿಗೆ ತಿಳಿದೇ ಇ್ಲ್ಲಲ ಎಂದು ಅವರು ದೂರಿದರು.

ಹೈಕಮಾಂಡ್ ಒಪ್ಪಿದರೆ ನಾನು ಬಳ್ಳಾರಿಯಿಂದ ಸ್ಪರ್ಧಿಸುತ್ತೇನೆ, ಇಲ್ಲ ವಾದಲ್ಲಿ ಜಿಲ್ಲೆಯ ಕನಿಷ್ಠ 5-6 ಸ್ಥಾನ ಗಳನ್ನಾದರೂ ಗೆಲಿಸಿಕೊಡಲು ಪ್ರಯತ್ನಿ ಸುತ್ತೇನೆಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದಕ್ಕೂ ಮುನ್ನ ಅವರು ತಾಲ್ಲೂಕಿನ ತುಪ್ಪಾಕನಹಳ್ಳಿ, ವಿರುಪಾಪುರ, ಅಡವಿ ಸೂರನಹಳ್ಳಿ, ಜರ್ಮಲಿ, ಹರುವದಿ, ದಿಬ್ಬದಹಳ್ಳಿ, ಚಂದ್ರಶೇಖರ ಪುರ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು. ನಂತರ ಗುಡೇಕೋಟೆಯಲ್ಲಿ ತಾಲ್ಲೂಕಿನ ಅಧಿ ಕಾರಿಗಳೊಂದಿಗೆ ಬರಪರಿಹಾರ ಕಾಮ ಗಾರಿಯ ಮಾಹಿತಿಯನ್ನು ಪಡೆದು, ಸೂಕ್ತ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಸಂಡೂರು ಶಾಸಕ ಈ.ತುಕಾರಾಂ, ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ, ಜಿ.ಪಂ ಸದಸ್ಯ ಕೆ.ಎಂ. ಶಶಿಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಜನ್ನು, ಹಿರೇಕುಂಬಳ ಗುಂಟೆ ಉಮೇಶ್, ಹಗರಿಬೊಮ್ಮನ ಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟಗನಳ್ಳಿ ಕೊಟ್ರೇಶ್, ದೊಡ್ಡ ರಾಮಣ್ಣ, ಗುಂಡು ಮುಣುಗು ತಿಪ್ಪೇಸ್ವಾಮಿ, ಸಾವಜ್ಜಿ ರಾಜೇಂದ್ರ ಪ್ರಸಾದ್, ಸೋಮಪ್ಪ ನಾಯಕ, ಜಯರಾಂ ನಾಯಕ, ಶಿವ ಪ್ರಸಾದ್, ಮರಿಯಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.