ADVERTISEMENT

ಶಂಕರಲಿಂಗೇಶ್ವರ ರಥೋತ್ಸವ

ಕೊಟ್ನಿಕಲ್ ಕ್ಯಾಂಪಿನಲ್ಲಿ ಭಕ್ತರ ಹರ್ಷೋದ್ಗಾರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 5:56 IST
Last Updated 16 ಜನವರಿ 2016, 5:56 IST
ಹೂವಿನಹಡಗಲಿ ತಾಲ್ಲೂಕಿನ ಕೊಟ್ನಿಕಲ್ ಕ್ಯಾಂಪಿನಲ್ಲಿ ಶಂಕರಲಿಂಗೇಶ್ವರ ಸ್ವಾಮಿ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು
ಹೂವಿನಹಡಗಲಿ ತಾಲ್ಲೂಕಿನ ಕೊಟ್ನಿಕಲ್ ಕ್ಯಾಂಪಿನಲ್ಲಿ ಶಂಕರಲಿಂಗೇಶ್ವರ ಸ್ವಾಮಿ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು   

ಹೂವಿನಹಡಗಲಿ: ತಾಲ್ಲೂಕಿನ ಕೊಟ್ನಿಕಲ್ ಕ್ಯಾಂಪಿನ ಸುಕ್ಷೇತ್ರ  ಶ್ರೀ ಶಂಕರಲಿಂಗೇಶ್ವರ ಸ್ವಾಮಿಯ ರಥೋತ್ಸವ ಶುಕ್ರವಾರ ಸಂಜೆ ಸಂಭ್ರಮದಿಂದ ಜರುಗಿತು.

ತುಂಗಭದ್ರೆಯ ತಟದಲ್ಲಿರುವ ಹುಣಸೆ ವನದಲ್ಲಿ ಮಕರ ಸಂಕ್ರಾಂತಿಯಂದು ವಿಜೃಂಭಣೆಯಿಂದ ಜರುಗಿದ ಸ್ವಾಮಿಯ ಜಾತ್ರೆಯಲ್ಲಿ  ಹೂವಿನಹಡಗಲಿ, ನವಲಿ, ಕಾಗನೂರು, ಕೊಟ್ನಿಕಲ್ ಸೇರಿದಂತೆ  ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಕರೆ ತರಲಾಯಿತು. ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ನಡೆದ ನಿಶಾನೆ ಹರಾಜಿನಲ್ಲಿ ಪ್ರಗತಿಪರ ರೈತ ಮಾಗಳದ ಬಿ.ಎಂ.ಮಹೇಶ್ವರಯ್ಯ ₹16,100 ಗಳಿಗೆ ಸ್ವಾಮಿಯ ನಿಶಾನೆ ಪಡೆದರು.

ಕಾಮನಾಳ ಕ್ಷೇತ್ರದ ಸಿದ್ದವೀರ ಸ್ವಾಮೀಜಿ, ಗವಿಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ, ಹಂಪಸಾಗರದ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ ಭಾಗವಹಿಸಿದ್ದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಆರ್.ಪ್ರಕಾಶ ಗೌಡ, ಸದಸ್ಯರಾದ ಸತ್ಯನಾರಾಯಣ, ಓಲಿ ಈಶಪ್ಪ,  ಎಸ್.ಎಂ. ವೃಷಬೇಂದ್ರಸ್ವಾಮಿ, ಎಸ್. ರುದ್ರಪ್ಪ, ವೀರಭದ್ರಗೌಡ, ಶಂಭಯ್ಯ, ಮುರುಳಿ ಕೃಷ್ಣ, ಷಣ್ಮುಖಪ್ಪ, ಪಿ.ಕೆ.ಎಂ. ವಿಶ್ವನಾಥಯ್ಯ, ಗಡ್ಡಿ ಚನ್ನಬಸಪ್ಪ, ಗಡ್ಡಿ ಸಿದ್ದಲಿಂಗಪ್ಪ ಕೆ.ವಿರೂಪಾಕ್ಷಗೌಡ್ರು ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.