ADVERTISEMENT

ಶಾಲೆ, ರಸ್ತೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 5:27 IST
Last Updated 10 ಅಕ್ಟೋಬರ್ 2017, 5:27 IST
ಸಂಡೂರು ತಾಲ್ಲೂಕಿನ ಕುರೆಕುಪ್ಪ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ ಗ್ರಾಮದ ಮುಖ್ಯ ರಸ್ತೆ ಜಲಾವೃತಗೊಂಡಿತ್ತು
ಸಂಡೂರು ತಾಲ್ಲೂಕಿನ ಕುರೆಕುಪ್ಪ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ ಗ್ರಾಮದ ಮುಖ್ಯ ರಸ್ತೆ ಜಲಾವೃತಗೊಂಡಿತ್ತು   

ಸಂಡೂರು: ತಾಲ್ಲೂಕಿನ ಕುರೆಕುಪ್ಪ ಗ್ರಾಮದಲ್ಲಿ ಸೋಮವಾರ ಸಂಜೆ ಸುಮಾರು ಒಂದೂವರೆ ಗಂಟೆ ಸುರಿದ ಮಳೆಯಿಂದ ಗ್ರಾಮದ ರಸ್ತೆಗಳು, ಶಾಲಾವರಣಗಳಲ್ಲಿ ಮೊಣಕಾಲುದ್ದ ನೀರು ಸಂಗ್ರಹವಾಗಿದೆ.

ತಗ್ಗು ಪ್ರದೇಶದ ಕೆಲ ಮನೆಗಳಿಗೂ ಮಳೆ ನೀರು ನುಗ್ಗಿದೆ. ಸಂಜೆ 4.30ಕ್ಕೆ ಗುಡುಗು ಮಿಂಚಿನ ಮಳೆ ಒಮ್ಮೆಲೆ ಆರಂಭವಾಗಿ 6 ಗಂಟೆವರೆಗೂ ಸುರಿದು ಜನರಲ್ಲಿ ಅಚ್ಚರಿಯನ್ನುಂಟು ಮಾಡಿತು.

‘ಹೂಲೆಪ್ಪನವರ ಮನೆಯಲ್ಲಿ ನೀರು ನುಗ್ಗಿ 2 ಕ್ವಿಂಟಲ್ ಅಕ್ಕಿಗೆ ಹಾನಿಯಾಗಿದೆ’ ಎಂದು ಪುರಸಭೆ ಸದಸ್ಯ ಹನುಮಂತಪ್ಪ ತಿಳಿಸಿದರು. ‘ಕೆಲ ವರ್ಷಗಳಿಂದ ಇಂಥ ಮಳೆಯನ್ನು ಕಂಡಿರಲಿಲ್ಲ’ ಎಂದು ಗ್ರಾಮದ ತಿಪ್ಪೇಸ್ವಾಮಿ ತಿಳಿಸಿದರು.

ADVERTISEMENT

‘ಮಳೆಯಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ’ ಎಂದು ತಹಶೀಲ್ದಾರ್ ಯು. ನಾಗರಾಜ ತಿಳಿಸಿದರು. ಸಂಡೂರು ಸುತ್ತಮುತ್ತ ಮೋಡ ಕವಿದ ವಾತಾವರಣವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.