ADVERTISEMENT

ಶಾಸಕ ರೆಡ್ಡಿ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 6:09 IST
Last Updated 7 ಜೂನ್ 2018, 6:09 IST
ಬಳ್ಳಾರಿಯ ಪಾಲಿಕೆ ಕಚೇರಿಯಲ್ಲಿ ಬುಧವಾರ ಪೂಜೆ ಬಳಿಕ ಶಾಸಕ ಜಿ.ಸೋಮಶೇಖರರೆಡ್ಡಿ ಅವರನ್ನು ಅರ್ಚಕರು ಆಶೀರ್ವದಿಸಿದರು
ಬಳ್ಳಾರಿಯ ಪಾಲಿಕೆ ಕಚೇರಿಯಲ್ಲಿ ಬುಧವಾರ ಪೂಜೆ ಬಳಿಕ ಶಾಸಕ ಜಿ.ಸೋಮಶೇಖರರೆಡ್ಡಿ ಅವರನ್ನು ಅರ್ಚಕರು ಆಶೀರ್ವದಿಸಿದರು   

ಬಳ್ಳಾರಿ: ನಗರ ಕ್ಷೇತ್ರದ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ಕಚೇರಿ ಉದ್ಘಾಟನೆ ಕಾರ್ಯಕ್ರಮದ ನಗರದ ಪಾಲಿಕೆ ಕಚೇರಿಯಲ್ಲಿ ಬುಧವಾರ ನಡೆಯಿತು.

ನಾಲ್ವರು ಅರ್ಚಕರು ಶಾಸಕರ ಕುರ್ಚಿಯಲ್ಲಿ ಕಸಾಪುರದ ಆಂಜನೇಯಸ್ವಾಮಿ ಹಾಗೂ ಶಾಸಕರ ತಂದೆ–ತಾಯಿಯ ಫೋಟೋ ಇಟ್ಟು ಪೂಜೆ ಸಲ್ಲಿಸಿದರು. ನಂತರ ಇಬ್ಬರು ಅರ್ಚಕರು ಶಾಸಕರ ಕುರ್ಚಿಯಲ್ಲಿ ಕುಳಿತು ಮಂತ್ರಗಳನ್ನು ಪಠಿಸಿ ಆಶೀರ್ವದಿಸಿದ ಬಳಿಕ ಶಾಸಕರು ಕುರ್ಚಿಯಲ್ಲಿ ಕುಳಿತುಕೊಂಡರು. ಅವರ ಪತ್ನಿ ಜಿ.ವಿಜಯ, ವೀರಶೇಖರ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT