ADVERTISEMENT

ಸಂಡೂರು: ಮಳೆಗೆ ಮನೆ ಕುಸಿತ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 5:23 IST
Last Updated 13 ಅಕ್ಟೋಬರ್ 2017, 5:23 IST

ಸಂಡೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ಬಂಡ್ರಿ, ಯಶವಂತನಗರ, ತೋರಣಗಲ್, ಕುರೆಕುಪ್ಪ, ಯಶವಂತನಗರ, ಸೋಮಲಾಪುರ ಗ್ರಾಮದಲ್ಲಿ ಬುಧವಾರ ರಾತ್ರಿ ಮಳೆ ಸುರಿಯಿತು.

ತಾಲ್ಲೂಕಿನ ತೋರಣಗಲ್‌ನಲ್ಲಿನ 2ನೇ ವಾರ್ಡಿನಲ್ಲಿ ಶಿವಕುಮಾರ್ ಕುಟುಂಬ ವಾಸವಾಗಿದ್ದ ಮಣ್ಣಿನ ಮೇಲ್ಚಾವಣಿಯ ಮನೆ ಕುಸಿದಿದೆ. ಯಾರಿಗೂ ತೊಂದರೆಯಾಗಿಲ್ಲ.

ಗುರುವಾರ ಬೆಳಿಗ್ಗೆಯೂ ಕೆಲ ಸಮಯ ಜಿಟಿಜಿಟಿ ಮಳೆ ಮುಂದುವರೆದಿತ್ತು. ಸಂಡೂರಿನಲ್ಲಿ 38 ಮಿ.ಮೀ, ಕುರೆಕುಪ್ಪದಲ್ಲಿ 17.2 ಮಿ.ಮೀ ಹಾಗೂ ಚೋರುನೂರಿನಲ್ಲಿ 4.2 ಮಿ.ಮೀ ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.