ADVERTISEMENT

ಸಮಸ್ಯೆ ಬಗೆಹರಿಸಲು ಕೂಲಿಕಾರ್ಮಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 6:05 IST
Last Updated 5 ಅಕ್ಟೋಬರ್ 2012, 6:05 IST

ಮರಿಯಮ್ಮನಹಳ್ಳಿ: ಪಟ್ಟಣದ 6ನೇ ವಾರ್ಡ್‌ನ ಮಹಿಳಾ ಕೂಲಿ ಕಾರ್ಮಿಕರ ಸಂಘಟನೆಯ ಸದಸ್ಯೆಯರು ಬುಧವಾರ ವಿವಿಧ ಬೇಡಿಕೆಗಳನ್ನು ಹಾಗೂ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ಸದಸ್ಯೆ ಎಂ.ಮಂಜುಳಾ ಮಾತನಾಡಿ, ಎನ್‌ಆರ್‌ಈಜಿ ಯೋಜನೆಯಡಿ ಕೂಲಿ ಕಾರ್ಮಿಕ ಮಹಿಳೆಯರಿಗೆ ಸಿಗಬೇಕಾದ ಮೂಲ ಸೌಲಭ್ಯಗಳು ಸಿಗುತ್ತಿಲ್ಲ. ಕೂಲಿ ಕಾರ್ಮಿಕ ಮಹಿಳೆಯರಿಗೆ ಸರಿಯಾಗಿ ಅಂತ್ಯೋದಯ ಪಡಿತರ ಚೀಟಿ ಹಾಗೂ ಆಮ್ ಆದ್ಮಿ ಯೋಜನೆಯಡಿ ಕಾರ್ಡ್‌ಗಳನ್ನು ಕೂಡಲೆ ವಿತರಿಸುವಂತೆ ಒತ್ತಾಯಿಸಿದರು.

ಕೂಲಿ ಕಾರ್ಮಿಕರು ಹಾಗೂ ದೇವದಾಸಿ ಮಹಿಳೆಯರಿಗೆ ದೇವದಾಸಿ ಪುನರ್ವಸತಿ ಯೋಜನೆ ಯಡಿ ವಸತಿ, ಪಡಿತರ ಚೀಟಿ ಹಾಗೂ ಅವರ ಮಕ್ಕಳ ಉನ್ನತ ಶಿಕ್ಷಕಣಕ್ಕೆ ಸವಲತ್ತು ನೀಡಬೇಕಿದೆ. ಕಳೆದ ಕೆಲ ತಿಂಗಳಿಂದ ದೇವದಾಸಿಯರಿಗೆ ಮಾಸಾಶನ ಬಂದಿಲ್ಲ. ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಎನ್. ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಹನುಮಕ್ಕ, ಸಾರಿ ದುರುಗಮ್ಮ, ಚಿಮ್ನಳೆಮ್ಮ, ಹುಲಿಗೆಮ್ಮ, ದುರುಗವ್ವ, ಹನುಮಕ್ಕ, ಲಕ್ಷ್ಮವ್ವ, ಮೈಲಮ್ಮ, ಮರಿಯವ್ವ, ನಿಂಗಮ್ಮ, ಹುಲಿಗೆಮ್ಮ, ಅಂಬವ್ವ, ಹನುಮವ್ವ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.