ADVERTISEMENT

ಸಮಾನತೆ ಸಾರಿದ ಮಾದಾರ ಚನ್ನಯ್ಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 4:40 IST
Last Updated 2 ಮಾರ್ಚ್ 2012, 4:40 IST

ಕಂಪ್ಲಿ: ಜಾತಿ ವ್ಯವಸ್ಥೆಯನ್ನು ವಚನಗಳ ಮೂಲಕ ಕಟುವಾಗಿ ಖಂಡಿಸಿ ಸಮಾನತೆ ಗಾಗಿ ಬಂಡಾಯ ತೋರಿದ ಶರಣರಲ್ಲಿ ಮಾದಾರ ಚನ್ನಯ್ಯ ಮೊಟ್ಟ ಮೊದಲಿಗರು ಎಂದು ಲೇಖಕ ಪರಮೇಶ್ವರಯ್ಯ ಸೊಪ್ಪಿನಮಠ ಅಭಿಪ್ರಾಯಪಟ್ಟರು.

ಪಟ್ಟಣದ 4ನೇ ವಾರ್ಡ್ ಹರಿಜಕೇರಿ ಕೆಂಚಮ್ಮನಗುಡಿಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಜಿ. ಗಂಗಪ್ಪ ಮತ್ತು ಜಿ. ಗಾಳೆಮ್ಮ ಜ್ಞಾನ ದಾಸೋಹದಡಿ ಬುಧವಾರ ಹಮ್ಮಿಕೊಂಡಿದ್ದ 19 ನೇ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾದಾರ ಚೆನ್ನಯ್ಯ ಸಮಾಜದಲ್ಲಿ ಅಖಂಡತೆ, ಲಿಂಗ, ಆರ್ಥಿಕ ಸಮಾನತೆ ಗಾಗಿ ಹೋರಾಡಿದವರು. ತಮಿಳು ನಾಡಿನ ಮಾದಾರ ಚನ್ನಯ್ಯ ಕನ್ನಡದಲ್ಲಿ ವಚನ ರಚಿಸಿ ಗಮನ ಸೆಳೆದಿದ್ದಾರೆ ಎಂದು ವಿವರಿಸಿದರು.

ಅಖಿಲ ಕರ್ನಾಟಕ ಬಸವ ಮಾದಾರ ಚನ್ನಯ್ಯ ಸಂಘದ ಅಧ್ಯಕ್ಷ ಜಿ. ರಾಮಣ್ಣ ಮಾತನಾಡಿ, ಮಾದಾರ ಚನ್ನಯ್ಯ ಅವರ ವಚನ ಸಂಗ್ರಹ, ಸಂಶೋಧನೆ ಅಗತ್ಯ ವಿದೆ. ಈ ನಿಟ್ಟಿನಲ್ಲಿ ಕನ್ನಡ ವಿಶ್ವ ವಿದ್ಯಾಲಯ ಸೇರಿದಂತೆ ಸರ್ಕಾರ ಸಮಗ್ರ ಮಾಹಿತಿಗೆ ಚಿಂತನೆ ನಡೆಸುವಂತೆ ಮನವಿ ಮಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಟಿ. ಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಿ. ಸಿದ್ದಪ್ಪ, ವಿ. ವೆಂಕಟರಮಣ, ಸಿ. ವೆಂಕಟೇಶ್, ವಕೀಲ ಎಚ್. ಹುಲುಗಪ್ಪ, ಸಣ್ಣ ಮಾರೆಪ್ಪ, ಎಚ್. ಕೊರಪ್ಪ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ. ಪ್ರಕಾಶ್, ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.