ADVERTISEMENT

ಹಳೆ ಬಸ್‌ನಿಲ್ದಾಣದಲ್ಲಿ ಮಳೆ ನೀರು: ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 5:16 IST
Last Updated 4 ಜೂನ್ 2013, 5:16 IST
ಬಳ್ಳಾರಿಯ ಹಳೆಯ ಬಸ್ ನಿಲ್ದಾಣದಲ್ಲಿ ಮಳೆ ನೀರು ನಿಂತು ಮಲಿನಗೊಂಡಿರುವುದು.
ಬಳ್ಳಾರಿಯ ಹಳೆಯ ಬಸ್ ನಿಲ್ದಾಣದಲ್ಲಿ ಮಳೆ ನೀರು ನಿಂತು ಮಲಿನಗೊಂಡಿರುವುದು.   

ಬಳ್ಳಾರಿ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ಹಳೆಯ ಬಸ್ ನಿಲ್ದಾಣದ ತುಂಬೆಲ್ಲ ನೀರು ನಿಂತಿದ್ದು, ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಬಸ್‌ಗಳನ್ನು ನಿಲುಗಡೆ ಮಾಡುವ ಪ್ರದೇಶದಲ್ಲಿ ನೀರು ನಿಂತು ಮಲಿನ ಗೊಂಡು ಈ ಪ್ರದೇಶದಲ್ಲಿ ದುರ್ನಾತ ಆವರಿಸಿದ್ದು, ಬಸ್‌ನಲ್ಲಿ ಪ್ರಯಾಣಿಕರು ಮೂಗು ಮುಚಿಕೊಂಡೇ  ಕುಳಿತು ಕೊಳ್ಳುವುದು ಅನಿವಾರ್ಯವಾಗಿದೆ.

ಪಕ್ಕದಲ್ಲೇ ಇರುವ ಸಾರ್ವಜನಿಕ ಶೌಚಾಲಯದಲ್ಲಿನ ತ್ಯಾಜ್ಯ, ಮೂತ್ರಿ ಈ ನೀರಿನಗುಂಟ ಹರಿದು ಬಂದಿದ್ದರಿಂದ ದುರ್ವಾಸನೆ ಹೆಚ್ಚಿದೆ. ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ ದ್ದರಿಂದಲೇ ಈ ಸಮಸ್ಯೆ ತಲೆ ದೋರಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಹೊಸಪೇಟೆ, ಕೊಪ್ಪಳ ಮಾತ್ರ ವಲ್ಲದೆ, ಬಳ್ಳಾರಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳತ್ತ ತೆರಳುವ ಬಸ್‌ಗಳು ಈ ಸ್ಥಳದಲ್ಲೇ ನಿಲ್ಲುತ್ತವೆ. 10ರಿಂದ 15 ನಿಮಿಷಗಳ ಕಾಲ ಪ್ರಯಾಣಿಕರಿಗಾಗಿ ತಂಗುವ ಬಸ್‌ಗಳಲ್ಲಿ ಕಾದು ಕುಳಿತು ಕೊಳ್ಳುವ ಪ್ರಯಾಣಿಕರಿಗೆ ಮಲಿನ ನೀರಿ ನಿಂದ ಹೊರಹೊಮ್ಮುವ ದುರ್ನಾ ತದಿಂದ ತೀವ್ರ ಸಮಸ್ಯೆ ಯಾಗುತ್ತಿದೆ ಎಂಬುದು ಅವರ ಆರೋಪ.

ಪ್ರತಿ ಬಾರಿ ಮಳೆ ಸುರಿದಾಗಲೂ ಈ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ ಕೆಲವು ದಿನಗಳವರೆಗೆ ಮಲಿನ ನೀರಿನಿಂದ ಹೊರಹೊಮ್ಮುವ ದುರ್ನಾತವನ್ನು ಸಹಿಸಿಕೊಂಡು ಸಾಕಾಗಿ ಹೋಗುತ್ತದೆ ಎಂದು ನಿತ್ಯವೂ ಕುರುಗೋಡು, ಕುಡುತಿನಿ, ತೋರಣಗಲ್ ಮತ್ತಿತರ ಭಾಗದಿಂದ ಆಗಮಿಸುವ ಅನೇಕ ಪ್ರಯಾಣಿಕರು ಅಳಲು ತೋಡಿ ಕೊಂಡರು.

ಅವ್ಯವಸ್ಥೆಯ ಆಗರವಾಗಿರುವ ಬಸ್ ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾರಿಗೆ ಸಂಸ್ಥೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಕುಡುತಿನಯ ಶರಣಪ್ಪ, ಬಸವರಾಜ, ಸಿರುಗುಪ್ಪ ತಾಲ್ಲೂಕಿನ ಬಿ.ಜಿ. ದಿನ್ನಿ ಗ್ರಾಮದ ಆರ್. ಪಿ. ಮಂಜುನಾಥ ಮತ್ತಿತರರು ಕೋರಿದ್ದಾರೆ.
ಈ ನೀರಿನಿಂದಾಗಿ ಶೌಚಾಲಯಕ್ಕೆ ತೆರಳಲೂ ದಾರಿ ಇಲ್ಲದ್ದರಿಂದ, ಬಳಸಿ ಕೊಂಡು ಹೋಗುವುದು ಅನಿವಾರ್ಯ.

ಈ ಕಾರಣದಿಂದಲೇ ಅನೇಕರು ರಾತ್ರಿಯ ವೇಳೆ ನಿಂತ ನೀರಿನಲ್ಲೇ ಮೂತ್ರ ವಿಸರ್ಜನೆ ಮಾಡುವುದರಿಂದ ನೀರು ಮತ್ತಷ್ಟು ದುರ್ನಾತ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.