ADVERTISEMENT

‘ರಸ್ತೆಗೆ ವಿಷ್ಣು ಹೆಸರಿಡಿ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 7:38 IST
Last Updated 1 ಜನವರಿ 2014, 7:38 IST

ಬಳ್ಳಾರಿ: ನಗರದ ಪ್ರಮುಖ ಮಾರು ಕಟ್ಟೆ ಒಳಗೊಂಡಿರುವ ಬೆಂಗಳೂರು ರಸ್ತೆಗೆ ಸಾಹಸಸಿಂಹ ಡಾ.ವಿಷ್ಣು ವರ್ಧನ್ ಅವರ ಹೆಸರಿಡಬೇಕು ಎಂದು ನವ ಕರ್ನಾಟಕ ನಿರ್ಮಾಣ ವೇದಿಕೆ ಆಗ್ರಹಿಸಿದೆ. ಡಾ.ವಿಷ್ಣುವರ್ಧನ್ ಅವರ 4ನೇ ಪುಣ್ಯಸ್ಮರಣೆ ದಿನ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಶೇಖರ್ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಈ ಕುರಿತ ಮನವಿ ಸಲ್ಲಿಸಿದರು.

ಕನ್ನಡ ಚಿತರಂಗಕ್ಕೆ ವಿಷ್ಣುವರ್ಧನ್‌ ಕೊಡುಗೆ ಅಪಾರ. ‘ನಾಗರಹಾವು’, ‘ವಂಶವೃಕ್ಷ’, ‘ಮುತ್ತಿನಹಾರ’, ‘ಆಪ್ತರಕ್ಷಕ’, ‘ಬಂಧನ’, ‘ಸಾಹಸ ಸಿಂಹ’, ‘ಜನನಾಯಕ’ ಮತ್ತಿತರ ಚಿತ್ರಗಳಲ್ಲಿ ಮನೋಜ್ಞವಾಗಿ ನಟಿಸಿ ಕನ್ನಡಿಗರ ಹೃದಯದಲ್ಲಿ ಅವರು ಅಚ್ಚಳಿಯದೆ ಉಳಿದಿದ್ದಾರೆ. ಅಂತಹ ಮಹಾನ್ ಕಲಾವಿದನ ಹೆಸರನ್ನು ಪ್ರಮುಖ ರಸ್ತೆಗೆ ಇಡಬೇಕು ಎಂದು ಕೋರಲಾಗಿದೆ.

ವೇದಿಕೆಯ ಕಾರ್ಯಾಧ್ಯಕ್ಷ ಆರ್.ವಿ. ಶ್ರೀನಿವಾಸ ರೆಡ್ಡಿ, ಕೆ.ಕುಪ್ಪಸ್ವಾಮಿ, ಎಂ.ವಿಶ್ವನಾಥ, ಬಿ. ದಿಲೀಪ್ ಕುಮಾರ, ಸುರೇಶ್, ಕೃಷ್ಣಮೂರ್ತಿ, ಕರ್ಣ, ಮಾಣಿಕ್ಯಂ, ಧನರಾಜ್, ಗೋವಿಂದಸ್ವಾಮಿ, ರವಿಕುಮಾರ, ಉದಯಕುಮಾರ,  ರಾಘವೇಂದ್ರ, ರಾಜೇಶ್, ಮನೋಜ್, ಅಮರ್ ಈ ಸಂದರ್ಭ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.