ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ ಅವರು ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆಯ ಒಂದು ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಆದರೆ, ಅವರ ವಿರುದ್ಧ 20 ಪ್ರಕರಣಗಳಿವೆ ಎಂಬುದು ಅವರ ಚುನಾವಣಾ ಅಫಿಡವಿಟ್‌ನಿಂದ ಗೊತ್ತಾಗಿದೆ.
20ರಲ್ಲಿ 14 ಪ್ರಕರಣಗಳು ಅಕ್ರಮ ಗಣಿಗಾರಿಕೆಗೆ ಸಂಬಂಧಪಟ್ಟಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ 2, ಅಕ್ರಮ ಆಸ್ತಿ ಗಳಿಕೆ, ಹೂಡಿಕೆದಾರರು ಮತ್ತು ಠೇವಣಿದಾರರ ಹಿತಾಸಕ್ತಿ ರಕ್ಷಣೆಗೆ ಸಂಬಂಧಿಸಿದ ಅಪರಾಧ, ಆದಾಯ ತೆರಿಗೆ ವಂಚನೆ, ಮತ್ತು ಕನಕಗಿರಿಯ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣಗಳಿವೆ.
ಲೋಕಾಯುಕ್ತವೊಂದರಲ್ಲೇ ಅವರ ವಿರುದ್ಧ 8 ಪ್ರಕರಣಗಳು ದಾಖಲಾಗಿವೆ. ಇದಲ್ಲದೇ, ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಮೂರು, ಎಸಿಬಿಯಲ್ಲಿ ಒಂದು, ಬೆಂಗಳೂರಿನ ಸಿಬಿಐ/ಎಸಿಬಿಯಲ್ಲಿ ನಾಲ್ಕು, ಚೆನ್ನೈ ಸಿಬಿಐ ಮತ್ತು ಬೆಂಗಳೂರಿನ ಸಿಐಡಿಯಲ್ಲಿ ತಲಾ ಒಂದೊಂದು ಪ್ರಕರಣಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.