ವಿಜಯನಗರ (ಹೊಸಪೇಟೆ): ಸಂಚಾರ ವ್ಯವಸ್ಥೆಯಲ್ಲಿ ಶಿಸ್ತು ಮೂಡಿಸಲು ಸ್ಥಳೀಯ ಪೊಲೀಸರು ಮುಂದಾಗಿದ್ದಾರೆ.
ಸಂಚಾರ ಪೊಲೀಸರು ನಗರದ ಪ್ರಮುಖ ರಸ್ತೆಗಳಲ್ಲಿ 300 ಸಂಚಾರ ಸೂಚನಾ ಫಲಕ, 4,000 ರಿಫ್ಲೆಕ್ಟರ್ಸ್ ಅಳವಡಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಡಿವೈಎಸ್ಪಿ ವಿ. ರಘುಕುಮಾರ, ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ಮಹಾಂತೇಶ್ ಸಜ್ಜನ್ ಹಾಗೂ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಅವರು ಸೋಮವಾರ ಬೆಳ್ಳಂಬೆಳಿಗ್ಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿ, ಎಲ್ಲೆಲ್ಲಿ ಸೂಚನಾ ಫಲಕ, ರಿಫ್ಲೆಕ್ಟರ್ಸ್ ಅಳವಡಿಸಬೇಕು ಎನ್ನುವುದರ ಕುರಿತು ಪರಿಶೀಲನೆ ನಡೆಸಿ, ಸಿಬ್ಬಂದಿಗೆ ಸೂಚನೆ ನೀಡಿದರು.
‘ಅಪಘಾತ ತಪ್ಪಿಸುವುದು ಹಾಗೂ ಸುಗಮ ವಾಹನಗಳ ಸಂಚಾರಕ್ಕಾಗಿ ಎಲ್ಲ ರಸ್ತೆಗಳಲ್ಲಿ ಸೂಚನಾ ಫಲಕ ಅಳವಡಿಸಲಾಗುತ್ತಿದೆ. ಅದೇ ರೀತಿ ಸ್ಪೀಡ್ ಬ್ರೇಕರ್ಸ್‌ಗಳಿಗೆ ರಿಫ್ಲೆಕ್ಟರ್ಸ್ ಅಳವಡಿಸಲಾಗುವುದು. ಅಪಘಾತ ವಲಯಗಳಲ್ಲಿ ಇನ್ನಷ್ಟು ಸ್ಪೀಡ್ ಬ್ರೇಕರ್ಸ್ ಹಾಕುವ ಚಿಂತನೆ ಕೂಡ ಇದೆ. ಒಂದು ವಾರದೊಳಗೆ ಎಲ್ಲ ಕೆಲಸ ಪೂರ್ಣಗೊಳಿಸಲಾಗುವುದು’ ಎಂದು ಮಹಾಂತೇಶ ಸಜ್ಜನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.