ADVERTISEMENT

ತುಂಗಭದ್ರಾ ನದಿಯಲ್ಲಿ 4 ಲಕ್ಷ ಮೀನು ಮರಿ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 16:03 IST
Last Updated 6 ಜನವರಿ 2024, 16:03 IST
ಕಂಪ್ಲಿ ಕೋಟೆ ಬಳಿಯ ತುಂಗಭದ್ರಾ ನದಿಗೆ ಮೀನುಗಾರಿಕೆ ಇಲಾಖೆಯಿಂದ 4 ಲಕ್ಷ ಮೀನು ಮರಿಗಳನ್ನು ಶನಿವಾರ ಬಿಡಲಾಯಿತು  
ಕಂಪ್ಲಿ ಕೋಟೆ ಬಳಿಯ ತುಂಗಭದ್ರಾ ನದಿಗೆ ಮೀನುಗಾರಿಕೆ ಇಲಾಖೆಯಿಂದ 4 ಲಕ್ಷ ಮೀನು ಮರಿಗಳನ್ನು ಶನಿವಾರ ಬಿಡಲಾಯಿತು     

ಕಂಪ್ಲಿ: ಕೋಟೆ ಬಳಿ ಹರಿಯುವ ತುಂಗಭದ್ರಾ ನದಿಗೆ 2021-22ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರರ ಅನುಕೂಲಕ್ಕಾಗಿ 4 ಲಕ್ಷ ಮೀನು ಮರಿಗಳನ್ನು ಶನಿವಾರ ಮೀನುಗಾರಿಕೆ ಇಲಾಖೆಯಿಂದ ಬಿತ್ತನೆ ಮಾಡಲಾಯಿತು.

ಇಲಾಖೆ ಜಂಟಿ ನಿರ್ದೇಶಕ ಜಿ.ಎಸ್. ಷಡಾಕ್ಷರಿ ಮಾತನಾಡಿ, ‘ನದಿಗೆ ರವ್ವ್, ಕಟ್ಲ, ಸಾಮಾನ್ಯ ಗೆಂಡೆ, ಕಾಮನ್ ಕರ್ಫ್, ಗ್ಲಾಸ್ ಕರ್ಫ್ ಜಾತಿಯ ಮೀನು ಮರಿಗಳನ್ನು ಬಿಡಲಾಗಿದೆ’ ಎಂದು ತಿಳಿಸಿದರು.

‘ಕಂಪ್ಲಿಯಲ್ಲಿ ಡಿಎಂಎಫ್ ಅನುದಾನದಡಿ ಮೀನು ಹರಾಜು ಕಟ್ಟೆ ನಿರ್ಮಿಸಿಕೊಡಲಾಗುವುದು. ನಿವೇಶನ ಹೊಂದಿದ ಮೀನುಗಾರರಿಗೆ ಮತ್ಸ್ಯಾಶ್ರಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.

ADVERTISEMENT

ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ, ಸಹಾಯಕ ನಿರ್ದೇಶಕ ಚಂದ್ರಶೇಖರ್, ಕಂಪ್ಲಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್. ಚಿನ್ನರಾಜು, ಪದಾಧಿಕಾರಿಗಳಾದ ಕೆ.ಷಣ್ಮುಗಮ್, ಎಸ್.ಆರ್. ನಾಗೇಶ್, ಅದ್ದಪ್ಪ ವಿರುಪಾಕ್ಷಿ, ರಾಜಾ, ಗಟ್ಟೆಪ್ಪ, ವೀರಭದ್ರ, ಪಂಪಾಪತಿ, ಕೃಷ್ಣ ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.