ADVERTISEMENT

ಬಳ್ಳಾರಿ: ಕಣ್ಣಿಗೆ ಬಟ್ಟೆಕಟ್ಟಿ ಪರೀಕ್ಷೆ ಬರೆದ ‘ಗಾಂಧಾರಿ ವಿದ್ಯೆ’ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 0:25 IST
Last Updated 12 ಡಿಸೆಂಬರ್ 2025, 0:25 IST
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ಹಿಮಾಬಿಂಧು 
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ಹಿಮಾಬಿಂಧು    

ಬಳ್ಳಾರಿ: ಇಲ್ಲಿನ ಖಾಸಗಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಹಿಮಾಬಿಂಧು (14) ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ‘ಗಾಂಧಾರಿ ವಿದ್ಯೆ’ ನೆರವಿನಿಂದ ಪರೀಕ್ಷೆ ಬರೆಯುತ್ತಾಳೆ.

ನಗರದ ಹೊರವಲಯದ ಕೊರ್ಲಗೊಂದಿ ನಿವಾಸಿಯಾದ ಆಕೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬರೆಯುತ್ತಾಳೆ ಮತ್ತು ವಸ್ತುಗಳನ್ನೂ ಗುರುತಿಸುತ್ತಾಳೆ. 

‘ಹಿಮಾ 11ನೇ ವಯಸ್ಸಿನಲ್ಲೇ ಗಾಂಧಾರಿ ವಿದ್ಯೆ ಕಲಿತಿದ್ದು, ಈಗ ಅದರ ಎರಡನೇ ಹಂತ ಕಲಿಯುತ್ತಿದ್ದಾಳೆ. ಈ ಹಿಂದೆಯೂ ಹಿಮಾ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈಕಲ್‌ ಕೂಡ ಚಲಾಯಿಸಿದ್ದಳು’ ಎಂದು ಆಕೆಯ ತಂದೆ ರಾಮಾಂಜಿನಿ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.    

ADVERTISEMENT

‘ಗಾಂಧಾರಿ ವಿದ್ಯೆಯ ಮೊದಲ ಹಂತದಲ್ಲಿ ವ್ಯಕ್ತಿಯು ಕಣ್ಣುಗಳನ್ನು ಮುಚ್ಚಿಕೊಂಡೇ ತನ್ನ ಮುಂದಿನ ವಸ್ತುಗಳನ್ನು ಗುರುತಿಸುವುದನ್ನು ಕಲಿತರೆ, ಎರಡನೇ ಹಂತದಲ್ಲಿ ಬೆನ್ನ ಹಿಂದೆ ನಡೆಯುವ ವಿಷಯಗಳನ್ನು ಗ್ರಹಿಸುತ್ತಾರೆ.  ಮೂರನೇ ಹಂತದಲ್ಲಿ ಅಕ್ಕಪಕ್ಕದ ಸಂಗತಿಗಳು ಗೊತ್ತಾಗುತ್ತವೆ’ ಎಂದರು.

‘ಚಿಕ್ಕಮಗಳೂರಿನ ಸತೇಶ್‌ ಪದ್ಮನಾಭ ಅವರಿಂದ ಮೂರು ವರ್ಷಗಳ ಹಿಂದೆ ಆನ್‌ಲೈನ್‌ನಲ್ಲಿ ಹಿಮಾ 20 ದಿನಗಳ ಅವಧಿಯಲ್ಲಿ ಈ ವಿದ್ಯೆ ಕಲಿತಿದ್ದಳು. ಇದಕ್ಕಾಗಿ ಸತೇಶ್‌ ಯಾವುದೇ ಕಾಣಿಕೆ ಪಡೆದಿಲ್ಲ. 6 ರಿಂದ 18 ವರ್ಷದ ಮಕ್ಕಳು ಇದನ್ನು ಕಲಿಯಬಹುದು. ಇದರಿಂದ ಮಕ್ಕಳ ಆಲೋಚನೆ, ಆತ್ಮವಿಶ್ವಾಸ, ಏಕಾಗ್ರತೆ ಹೆಚ್ಚುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.