ADVERTISEMENT

ಬಳ್ಳಾರಿ | 11ಕ್ಕೂ ಹೆಚ್ಚು ಜನರ ಮೇಲೆ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 2:07 IST
Last Updated 1 ಮಾರ್ಚ್ 2026, 2:07 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬಳ್ಳಾರಿ: ‘ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆಯಾಗುತ್ತಿದೆ’ ಎಂದು ಆರೋಪಿಸಿ ನಗರದ ಹೊರವಲಯದ ‘ಪ್ಯುಪಿಲ್‌ ಟ್ರೀ’ ಎಂಬ ಶಾಲೆಯಲ್ಲಿ ಶುಕ್ರವಾರ ನಡೆದಿದ್ದ ದಾಂಧಲೆಗೆ ಸಂಬಂಧಿಸಿದಂತೆ ಎಬಿವಿಪಿಯ 11 ಪದಾಧಿಕಾರಿಗಳೂ ಮತ್ತು ಇತರರ ಮೇಲೆ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.  

ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥರಾದ ಪ್ರಭುರಾಜ ಜಹಗೀರದಾರ ನೀಡಿದ ದೂರು ಆಧರಿಸಿ ಎಬಿವಿಪಿಯ ಬಳ್ಳಾರಿ ವಿಭಾಗದ ಕಾರ್ಯದರ್ಶಿ ನಾಗರಾಜ (26), ಎಚ್. ಎಮ್. ಅಭಿಷೇಕ್ ಸ್ವಾಮಿ (23), ಸಂಘಟನಾ ಕಾರ್ಯದರ್ಶಿ ಬಿ. ಭರತ್ (24), ಕಿರಣ್ ವಸ್ತ್ರದ್ (20), ಬಿ. ಸಾಗರ (23), ಹನುಮೇಶ್ (20), ಸಂತೋಷ ಪಾಟೀಲ ಕೆ. (19),  ವೆಂಕಟ ಸಪ್ತಗಿರಿ ಕ್ಷಮಿಸಿ, ನಾನು ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲ. ದಯವಿಟ್ಟು ಇಂಗ್ಲಿಷ್ ಅಥವಾ ಬೇರೆ ಭಾಷೆಯಲ್ಲಿ ಕೇಳಿ.21), ಬಿ ಆದರ್ಶ (18) ಮತ್ತು ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರು, ಇತರರ  ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  

ಇವರ ವಿರುದ್ಧ ಅಕ್ರಮ ಕೂಟ, ಗಲಭೆ ಸೃಷ್ಟಿ, ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ, ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ, ಹಲ್ಲೆ ನಡೆಸಿದ, ಕ್ರಿಮಿನಲ್ ಬಲಪ್ರಯೋಗ, ಕ್ರಿಮಿನಲ್ ಬೆದರಿಕೆ, ಸಾರ್ವಜನಿಕ ಶಾಂತಿಗೆ ಭಂಗ ತರುವ ಅಥವಾ ಇನ್ನೊಂದು ಅಪರಾಧಕ್ಕೆ ಕಾರಣವಾಗುವ, ಕಿಡಿಗೇಡಿತನದ ಗಂಭೀರ ಕೃತ್ಯ, ಅಪರಾಧಿಕ ಅತಿಕ್ರಮಣ ಆರೋಪದ ಮೇಲೆ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ADVERTISEMENT

ಇದರ ಜತೆಗೆ ಕರ್ನಾಟಕ ಆಸ್ತಿ ನಾಶ ಮತ್ತು ನಷ್ಟ ತಡೆಗಟ್ಟುವಿಕೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲೂ ಪ್ರಕರಣ ದಾಖಲು ಮಾಡಲಾಗಿದೆ. 

ಘಟನೆಯಲ್ಲಿ ನಾಲ್ವರಿಗೆ ಗಾಯ: ಶುಕ್ರವಾರ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ನಡೆಸಿದ ದಾಂಧಲೆಯಲ್ಲಿ ಪೊಲೀಸರೂ ಸೇರಿದಂತೆ ಐವರಿಗೆ ಗಾಯಗಳಾಗಿವೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಬಳ್ಳಾರಿ ಗ್ರಾಮೀಣ ಠಾಣೆಯ ಪಿಎಸ್‌ಐ ಹೊನ್ನಪ್ಪ, ಹೆಡ್‌ ಕಾನ್‌ಸ್ಟೇಬಲ್‌ಗಳಾದ ಬೀರಪ್ಪ, ಪರಶುರಾಮ, ಶಾಲೆಯ ಸಿಬ್ಬಂದಿಯಾದ ಮಂಜುನಾಥ ಮತ್ತು ರಾಜಶೇಖರ ಅವರಿಗೂ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ. 

ಇನ್ನು ಪ್ರಕರಣದ ಸಂಬಂಧ ಜಿಲ್ಲೆಯ ಹಲವು ಬಿಜೆಪಿ ನಾಯಕರು ಪೊಲೀಸ್‌ ಅಧಿಕಾರಿಗಳಿಗೆ ಕರೆ ಮಾಡಿ, ‘ನೋಡಿ, ಮಾಡಿ ಪ್ರಕರಣ ದಾಖಲು ಮಾಡಿ’ ಎಂದು ಹೇಳಿದರು ಎನ್ನಲಾಗಿದೆ. ಆದರೆ, ಅದೆಲ್ಲವನ್ನೂ ಬದಿಗಿಟ್ಟು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಪ್ರಕರಣ ದಾಖಲು ಮಾಡಿಸಿದ್ದಾರೆ.  

ಎಲ್ಲರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡಿದ್ದೇವೆ. ಸ್ಟೇಷನ್‌ ಬೇಲ್‌ ನೀಡಿ ಕಳುಹಿಸಲಾಗಿದೆ ಎಂದು ಗ್ರಾಮೀಣ ಠಾಣೆ ಸಿಪಿಐ ಪ್ರಜಾವಾಣಿಗೆ ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.