ಹೂವಿನಹಡಗಲಿ: ತಾಲ್ಲೂಕಿನ ಮರಳು ಸ್ಟಾಕ್ ಯಾರ್ಡ್‌ಗಳು ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದು, ನಿರ್ಮಾಣ ಕೆಲಸಗಳಿಗೆ ಮರಳು ಅಭಾವ ಉಂಟಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದಂಧೆಕೋರರು ಅಲಬೂರು ಹಳ್ಳದ ಮರಳನ್ನು ನಿಯಮ ಮೀರಿ ಸಾಗಾಟ ಮಾಡಿ, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಕೊಟ್ಟೂರು ತಾಲ್ಲೂಕು ಅಲಬೂರು ಬಳಿ ಹಳ್ಳದಲ್ಲಿ ಮರಳು ಗಣಿಗಾರಿಕೆಗೆ ಸರ್ಕಾರ ಈಚೆಗೆ ಅನುಮತಿ ನೀಡಿದೆ. ಇಲ್ಲಿ ಒಂದು ಪಾಸ್ ಪಡೆದು ಐದಾರು ಟಿಪ್ಪರ್ ಅಕ್ರಮವಾಗಿ ತುಂಬಿ ಪಟ್ಟಣಕ್ಕೆ ಸಾಗಿಸುತ್ತಿದ್ದಾರೆ. 8 ಟನ್ ಪರ್ಮಿಟ್ ಪಡೆದು 15 ಟನ್ ಮರಳು ತುಂಬಿ ಸಾಗಿಸಲಾಗುತ್ತಿದೆ. ಬೇರೆಡೆ ಪರ್ಮಿಟ್‌ನ ಟಿಪ್ಪರ್‌ಗಳು, ಓವರ್ ಲೋಡ್ ಲಾರಿಗಳು ಇಟ್ಟಿಗಿ, ಹಡಗಲಿ ಪೊಲೀಸ್ ಠಾಣೆ ಮುಂದೆ ಓಡಾಡಿದರೂ ತಡೆಯದಿರುವುದು ಅನುಮಾನ ಮೂಡಿಸಿದೆ.
ನದಿಯ ಮರಳಿಗೆ ಹೋಲಿಸಿದರೆ ಅಲಬೂರು ಹಳ್ಳದ ಮರಳು ಗುಣಮಟ್ಟದಿಂದ ಕೂಡಿರುವುದಿಲ್ಲ. ಅಭಾವ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡಿರುವ ದಂಧೆಕೋರರು ಹಳ್ಳದ ಮರಳನ್ನೂ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಿ, ಸರ್ಕಾರ ನಿಗದಿಪಡಿಸಿದ ಬೆಲೆಗೆ ಮರಳು ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಲಬೂರು ಸ್ಟಾಕ್ ಯಾರ್ಡ್ ಮೇಲೆ ನಿಗಾವಹಿಸಿ ಓವರ್ ಲೋಡ್ ಸಾಗಣೆ ಮತ್ತು ಪರ್ಮಿಟ್ ದುರ್ಬಳಕೆ ತಡೆಗೆ ಕ್ರಮ ಕೈಗೊಳ್ಳುತ್ತೇವೆಕೀರ್ತಿಕುಮಾರ್ ಹೊಸಪೇಟೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.